ಚಿಕ್ಕಮಗಳೂರಿನ ಬಾರ್‌ಲೈನ್ ರಸ್ತೆಯಲ್ಲಿ ಶನಿವಾರ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿ ಕರ ಸಂಘದಿAದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಕಾರ್ತಿಕ್ ಧ್ವಜಾರೋಹಣ ನೆರವೇರಿಸಿದರು. 
ಜಿಲ್ಲೆ

ಕನ್ನಡ ಪ್ರಪಂಚದ ಶ್ರೇಷ್ಟ ಸಂಸ್ಕೃತಿ

ಚಿಕ್ಕಮಗಳೂರು: ಕನ್ನಡ ಪ್ರಪಂಚದ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಹೀಗಾಗಿ ಕನ್ನಡದ ದೀಪವನ್ನು ಚಿರಕಾಲ ಉಳಿಸಿ ಬೆಳೆಸುವ ಕಾರ್ಯ ನಾವುಗಳು ಮಾಡಬೇಕಿದೆ ಎಂದು ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಕಾರ್ತಿಕ್ ತಿಳಿಸಿದರು.

ನಗರದ ಬಾರ್‌ಲೈನ್ ರಸ್ತೆಯಲ್ಲಿ ಶನಿವಾರ ಸುವರ್ಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿ ಕರ ಸಂಘದಿAದ ಶನಿವಾರ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡವು ಕೇವಲ ಭಾಷೆಯಲ್ಲ. ಬದಲಿಗೆ ಜಗತ್ತಿನ ಶ್ರೀಮಂತ ಸಂಸ್ಕೃತಿಯ ಅಭಿವ್ಯಕ್ತಿ. ಕನ್ನಡವು ಜಗತ್ತಿನ ಅತ್ಯಂತ ಪುರಾತನ ಭಾಷೆೆಗಳಲ್ಲಿ ಒಂದು ಮಾತ್ರವಲ್ಲ, ಜಗತ್ತಿನ ಸುಂದರ ಭಾಷೆಗಳಲ್ಲಿಯೂ ಒಂದು. ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡದ್ದಾಗಿದೆ ಎಂದು ಹೇಳಿದರು.

ದಿನನಿತ್ಯವೂ ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವ ಮೂಲಕ ಜನರಲ್ಲಿ ಇದರ ಮಹತ್ವ ಸಾರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರೂ ಕನ್ನಡ ಏಳ್ಗೆಗೆ ಕಂಕಣಬದ್ಧರಾಗಬೇಕು. ಹೀಗಾಗಿ ಎಲ್ಲರೂ ಒಂದಾಗುವ ಮೂಲಕ ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮನಿರಾಜ್, ಮುಖಂಡರಾದ ಆನಂದ್, ರೂಬಿನ್, ಅತ್ತರ್‌ಮೊಯಿಸ್, ಸುರೇಶ್, ಅಭಿ, ಸುಜಯ್, ಶಾಂತಕುಮಾರ್, ರಾಜೇಶ್, ಬೈರೇಶ್, ರವಿ ಏಂಜಲ್ ಮತ್ತಿತರರಿದ್ದರು.