ಯಾದಗಿರಿಯಲ್ಲಿ ಶನಿವಾರ ಕರೆದಿದ್ದ ಕರವೇ ಸಂಘಟನೆ ಸಭೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿದರು. ಸಂತೋಷ್ ನಿರ್ಮಲ್‌ಕರ್, ವಿಶ್ವಾರಾಧ್ಯ ದಿಮ್ಮೆ, ಅಂಬರೀಶ ಹತ್ತಿಮನಿ, ಹಣಮಂತ ನಾಯಕ, ಶರಣಪ್ಪ ದಳಪತಿ, ಶರಣು ಸಾಹುಕಾರ ವಡ್ನಳ್ಳಿ, ಹಣಮಂತ ಅಚ್ಚೋಲಾ ಇತರರಿದ್ದರು. 
ಜಿಲ್ಲೆ

ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಿ

ಯಾದಗಿರಿ: ಜಿಲ್ಲೆಯಾದ್ಯಂತ ಖಾಸಗಿ ಶಾಲೆ, ಕಾಲೇಜು, ವ್ಯಾಪಾರ ವಾಣಿಜ್ಯೋದ್ಯಮ ಸಂಸ್ಥೆಗಳು ನ.1ರೊಳಗೆ ಸರ್ಕಾರದ ಆದೇಶದಂತೆ ಶೇ.60 ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಿಕೊಳ್ಳಬೇಕು, ಒಂದು ವೇಳೆ ಅಳವಡಿಸಿಕೊಳ್ಳದಿದ್ದಲ್ಲಿ ಕರವೇ ಕಾರ್ಯಕರ್ತರು ಸ್ವತಃ ಮುಂದಾಗಿ, ನಾಮಫಲಕ ತೆರವುಗೊಳಿಸಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ್ ಎಚ್ಚರಿಸಿದ್ದಾರೆ.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಶನಿವಾರ ಕರೆದಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಹಾಕಿಕೊಂಡು ಕಾರ್ಯನಿರ್ವಹಿಸಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳನ್ನು ನಮ್ಮ ಕಾರ್ಯಕರ್ತರು ಪ್ರಶ್ನಿಸಲಿದ್ದಾರೆ ಎಂದರು.

ಮುAದಿನ ಚಳಿಗಾಲದ ಅಧಿವೇಷನದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಕ್ರಮಕೈಗೊಳ್ಳಬೇಕು, ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಎಲ್ಲರೂ ಸಂಭ್ರಮದಿAದ ಆಚರಿಸಬೇಕು. ಇದಕ್ಕಾಗಿ ತಾಲೂಕು ಅಧ್ಯಕ್ಷರುಗಳು ಪ್ರತಿ ಗ್ರಾಮ ಘಟಕಗಳ ಅಧ್ಯಕ್ಷರ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷ ತಯಾರಿಸಲು ಸೂಚಿಸಬೇಕು ಎಂದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಕರವೇ ಮುಖಂಡರಾದ ಸಂತೋಷ್ ನಿರ್ಮಲ್‌ಕರ್, ವಿಶ್ವಾರಾಧ್ಯ ದಿಮ್ಮೆ, ಅಂಬರೀಶ ಹತ್ತಿಮನಿ, ಹಣಮಂತ ನಾಯಕ, ಶರಣಪ್ಪ ದಳಪತಿ, ಶರಣು ಸಾಹುಕಾರ ವಡ್ನಳ್ಳಿ, ಹಣಮಂತ ಅಚ್ಚೋಲಾ, ಚೌಡಯ್ಯ ಬಾವೂರ, ವಿಶ್ವರಾಜ ಹೊನಗೇರಾ, ಯಮನಯ್ಯ ಗುತ್ತೇದಾರ, ಭೀಮು ಮಲ್ಲಿಬಾವಿ, ಸಾಹೇಬಗೌಡ ನಾಯಕ, ಸಿದ್ದಪ್ಪ ಕೂಯಿಲೂರು, ಭೀಮರಾಯ ರಾಮಸಮುದ್ರ, ಹಣಮಂತ ತೇಕರಾಳ, ಸಲೀಂ ಪಾಷಾ ಯರಗೋಳ, ಸಿದ್ದಪ್ಪ ಕ್ಯಾಸಪನಳ್ಳಿ, ಶರಣು ಅಂಗಡಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚನ್ನೂರ, ಮಂಜು ರಾಂಪೂರಳ್ಳಿ, ಹಣಮಗೌಡ ಶಖಾಪೂರ, ಗೋಪಾಲ ಗುರುಮಠಕಲ್, ಸಿದ್ಧಲಿಂಗ ರೆಡ್ಡಿ ಮುನಗಲ್, ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ಲಕ್ಷö್ಮಣ ಕೂಡ್ಲೂರು, ಯಲ್ಲು ಚಾಮನಳ್ಳಿ, ಬಸ್ಸು ನಾಯಕ ಸೇರಿದಂತೆ ಇತರರಿದ್ದರು.