????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಕನ್ನಡ ಜ್ಯೋತಿ ರಥಯಾತ್ರೆ ಅದ್ದೂರಿ ಮೆರವಣಿಗೆ

ಹನೂರು : ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಬುಧವಾರ ಹನೂರಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಹಾಗೂ ಅಧಿಕಾರಿಗಳ ತಂಡ ಸ್ವಾಗತಿಸಿ ಮೆರವಣಿಗೆ ನಡೆಸಿತು.

ಪಟ್ಟಣದ ಕೃಷಿ ಉತ್ಪನ್ನ ಮಾರುಟ್ಟೆ ಆವರಣದಲ್ಲಿ ನೆರೆದಿದ್ದ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಅಧಿಕಾರಿಗಳು, ನೌಕರರು ಹಾಗೂ ವಿವಿಧ ಶಾಲೆಯಿಂದ ಆಗಮಿಸಿದ್ದ ಮಕ್ಕಳ ಸಮ್ಮುಖದಲ್ಲಿ ರಥಯಾತ್ರೆಗೆ ಪೂಜೆ ಸಲ್ಲಿಸಲಾಯಿತು. ಕನ್ನಡಾಂಬೆಯ ಮೂರ್ತಿಗೆ ಮಾಲೆ ಅರ್ಪಿಸಿ, ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಮಾತನಾಡಿ, ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕನ್ನಡ ಕಂಪನ್ನು ಸೂಸುವ ಸಲುವಾಗಿ ಈ ರಥಯಾತ್ರೆಯೂ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಇದೀಗ ಹನೂರಿಗೆ ಆಗಮಿಸಿದ್ದು, ಮೆರವಣಿಗೆ ಅರ್ಥಪೂರ್ಣವಾಗಿ ನೆರವೇರಿಸಿ ಕೊಳ್ಳೇಗಾಲಕ್ಕೆ ಕಳುಹಿಸಿಕೊಡಬೇಕಿದೆ. ಕನ್ನಡ ಸಾಹಿತ್ಯವು ತನ್ನದೇಯಾದ ಇತಿಹಾಸ ಹೊಂದಿದ್ದು, ಕಾವ್ಯ, ಕಾದಂಬರಿ, ಕಥೆ, ನಾಟಕ, ಹಾಸ್ಯ, ಮಕ್ಕಳ ಸಾಹಿತ್ಯ ಹಾಗೂ ಇತರ ಪ್ರಕಾರಗಳಿಂದ ಶ್ರೀಮಂತವಾಗಿದೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯ ಉತ್ಕೃಷ್ಟತೆಯನ್ನು ಪಡೆದಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯವನ್ನು ಓದುವಂತಾಗಬೇಕು. ಜತೆಗೆ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮೆರವಣಿಗೆ:

ಬಳಿಕ ಆರ್‌ಎಂಸಿ ಆವರಣದಿಂದ ಹೊರಟ ಮೆರವಣಿಗೆ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಬಂಡಳ್ಳಿ ಮುಖ್ಯ ರಸ್ತೆಯವರೆಗೂ ಸಾಗಿ ಹಿಂತಿರುಗಿತು. ಈ ವೇಳೆ ಡೊಳ್ಳುಕುಣಿತ ಎಲ್ಲರ ಗಮನ ಸೆಳೆಯಿತು. ವಾದ್ಯ ತಾಳಕ್ಕೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬಳಿಕ ರಥಯಾತ್ರೆಯನ್ನು ಕೊಳ್ಳೇಗಾಲಕ್ಕೆ ಕಳುಹಿಸಿ ಕೊಡಲಾಯಿತು. ಶಿರಸ್ತೇದಾರ್ ನಾಗೇಂದ್ರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಶಿಕ್ಷಣ ಸಂಯೋಜಕರಾದ ಅಶೋಕ್, ಚಿನ್ನಪ್ಪಯ್ಯ, ಮಹೇಶ್, ಆರ್‌ಐಗಳಾದ ಶೇಷಣ್ಣ, ಮಹದೇವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್, ಸಾರ್ವಜನಿಕ ಹಿತ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಟಿ. ಸೋಮಶೇಖರ್, ಕರವೇ ಅಧ್ಯಕ್ಷ ರಾಹುಲ್ ಹಾಗೂ ಇನ್ನಿತರರು ಇದ್ದರು.