ವಿರಾಜಪೇಟೆಯ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. 1 ವಿರಾಜಪೇಟೆಯ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. 
ಜಿಲ್ಲೆ

ಕನ್ನಡ ಕಾರ್ಯಕ್ರಮಗಳು ಹೆಚ್ಚು ಆಯೋಜನೆಯಾಗಲಿ

ವಿರಾಜಪೇಟೆ: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದು ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದರು.

ಗಣರಾಜ್ಯೋತ್ಸವ ಅಂಗವಾಗಿ ವಿರಾಜಪೇಟೆ ಕರ್ನಾಟಕ ಸಂಘ ವತಿಯಿಂದ ಪುರಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತರ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದವರು ಅವರ ರಾಜ್ಯದ ಭಾಷೆಯನ್ನೆ ಮಾತನಾಡುತ್ತಾರೆ. ಆದರೆ ಕರ್ನಾಟಕದಿಂದ ಹೊರ ರಾಜ್ಯಕ್ಕೆ ಹೋದಾಗ ಆ ರಾಜ್ಯದ ಭಾಷೆ ಮಾತನಾಡಬೇಕು. ಹೀಗಾಗಿ ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡುವಂತಾಗಬೇಕು ಎಂದರು.

ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಸ್ಪರ್ಧಾ ಕಾರ್ಯಕ್ರಮ ಸಹಕಾರಿ. ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಳುವ ಮೂಲಕ ಗುರಿ ಮುಟ್ಟುವಂತಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಎಂ.ಬೆಲ್ಲು ಬೋಪಯ್ಯ, ನವೆಂಬರ್‌ನಲ್ಲಿ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸಂಘದ ಕಾರ್ಯದರ್ಶಿ ಎಂ.ಬಿ.ಅರುಣ್ ಅಪ್ಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಂಘದ ಉಪಾಧ್ಯಕ್ಷ ಚೇನಂಡ ಈ.ಗಿರೀಶ್ ಪೂಣಚ್ಚ ಮಾತನಾಡಿದರು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ತಾತಂಡ ಪ್ರಭನಾಣಯ್ಯ ಮತ್ತು ಎಂ.ಕುಸುಮಾ ಸೋಮಣ್ಣ ಭಾಗವಹಿಸಿದ್ದರು. ಸಿ.ಎಂ.ಸುರೇಶ್ ನಾಣಯ್ಯ, ಸಹಕಾರ್ಯದರ್ಶಿ ಎಂ.ಸಿ.ಅಶೋಕ್, ಕಚೇರಿ ಕಾರ್ಯದರ್ಶಿ ಎಂ.ರಾಧಾ, ಸದಸ್ಯರಾದ ಕೆ.ಯು ಗಣೇಶ್ ತಮ್ಮಯ್ಯ, ಸಿ.ಪಿ.ಕಾವೇರಪ್ಪ, ಎ.ಎಂ.ಜೋಯಪ್ಪ, ಪಿ.ಎಸ್.ನಂದ, ಎಂ.ರಾಣು ಮಂದಣ್ಣ, ಎಂ.ಜಿ.ಪೂಣಚ್ಚ, ಬಿ.ಆರ್.ಗಣೇಶ್, ಬಿ.ಗಣೇಶ್ ಬಿದ್ದಪ್ಪ ಇದ್ದರು.