ಜಿಲ್ಲೆ

ಕನ್ನಡ ಅಂತಃಸತ್ವದ ಅನಾವರಣಕ್ಕೆ ಗಮಕ ಕಲೆ ಸಹಕಾರಿ

ಚಿತ್ರದುರ್ಗ: ಗಮಕ ಕಲೆ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ ಕಾರ‌್ಯ ಶ್ಲಾಘನೀಯ ಎಂದು ಬಾ ಪೂಜಿ ವಿದ್ಯಾಸಂಸ್ಥೆ ಗೌರವ ಕಾರ‌್ಯದರ್ಶಿ ಕೆ.ಎಂ.ವೀರೇಶ್ ಹೇಳಿದರು. ಸಂಘದಿಂದ ನಗರದ ಜೆಸಿಆರ್ ಗಣಪತಿ ದೇವಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ 22ನೇ ಮಾಸಿಕ ಗಮಕ ವಾಚನ ವ್ಯಾಖ್ಯಾನ ಕಾರ‌್ಯಕ್ರಮದಲ್ಲಿ ಮಾತನಾಡಿ,ಕನ್ನಡದ ಅಂತಃಸತ್ವವನ್ನು ಎತ್ತಿ ಹಿಡಿಯಲು ಗಮಕ ಕಲೆ ಅಗತ್ಯ ವೆಂಬುದು ಸರ್ವವೇದ್ಯವೆಂದರು. ಗಮಕ ಚಟುವಟಿಕೆಗಳಿಗೆ ದೇಣಿಗೆ ಘೋಷಿಸಿದರು.

ಕುಮಾರವ್ಯಾಸ ಭಾರತದ ಭೀಷ್ಮ ಪರ್ವದ ಕಾವ್ಯ ಭಾಗವನ್ನು ಗಮಕಿ ಅಂಶುಅನಂತ್ ವಾಚನಕ್ಕೆ, ಪಿ .ಅನಂತಕೃಷ್ಣ ವ್ಯಾಖ್ಯಾನ ನೀಡಿದರು. ಸಂಘ ದ ಅಧ್ಯಕ್ಷೆ ಕೆ.ಆರ್.ರಮಾದೇವಿವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಶಶಿಧರ್‌ಶಾನುಭೋಗ್ ಪ್ರಾರ್ಥಿಸಿದರು. ಬಿ.ಎಲ್.ಉಮಾ ಸ್ವಾಗತಿಸಿ ದರು. ಪ್ರಕಾಶ,ಹರೀಶ್,ಚಿದಾನಂದಪ್ಪ,ಪದ್ಮಕುಮಾರಿ,ಸಾವಿತ್ರಮ್ಮ,ರೇಣುಕಾರಾಜು,ಶಾಂತಮ್ಮ ,ನಂಜುಂಡರಾವ್,ಡಾ.ರಾಜೀವಲೋಚನ, ಮೀನಾಕ್ಷಿಭಟ್,ಚಂದ್ರಮತಿ ಇತರರು ಇದ್ದರು.