ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ವಸತಿ ಶಾಲೆಯ ನೌಕರರು ಪ್ರತಿಭಟನೆ ನಡೆಸಿದರು. ಸಂಘದ ಪದಾಽಕಾರಿಗಳಾದ ಹುಲಗಪ್ಪ ಚಲವಾದಿ, ರಾಜೇಶ ದೇಶಪಾಂಡೆ, ರಾಜು ಯಾದವಾಡ, ಆನಂದ ಹಾದಿನಮನಿ, ರಾಜು ಮಾದರ ಇತರರು ಇದ್ದರು.  
ಜಿಲ್ಲೆ

ಕನಿಷ್ಠ ೨೫ ಸಾವಿರ ರೂ. ವೇತನ ಪಾವತಿಸಿ

ಬಾಗಲಕೋಟೆ: ಸಹಕಾರಿ ಸಂಘಗಳ ಮೂಲಕ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ವಸತಿ ಶಾಲೆಯ ನೌಕರರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೌಕರರು ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗೀಡದ ಅವರ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೆÊಸ್ ಇಲಾಖೆ ಸಹಯೋಗದಲ್ಲಿ ಅಂದಾಜು ೧೫,೨೦ ವರ್ಷಗಳಿಂದ ಹೊರಗುತ್ತಿಗೆ ಆಧಾರ ಮೇಲೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಗುತ್ತಿಗೆ ಏಜೆನ್ಸಿಗಳ ಹಾವಳಿ ತಪ್ಪಿಸಲು ಬೀದರ ಜಿಲ್ಲೆಯ ಮಾದರಿಯಲ್ಲಿ ಸಹಕಾರಿ ಸಂಘಗಳ ಮೂಲಕ ವೇತನ ಪಾವತಿಸಬೇಕು, ಕನಿಷ್ಠ ೨೫ ಸಾವಿರ ರೂ. ವೇತನ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಹಾಸ್ಟಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರರಿಗೆ ವಾರಕ್ಕೊಮ್ಮೆ ರಜೆ ಕಡ್ಡಾಯಗೊಳಿಸಬೇಕು, ೨೦೧೪ ನಂತರ ಪ್ರಾರಂಭವಾದ ಕ್ರೆÊಸ್ ವಸತಿ ಶಾಲೆಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು, ಹೊರ ಗುತ್ತಿಗೆ ನೌಕರರಿಂದ ಶೌಚಗೃಹ ಸ್ವಚ್ಛತೆ ಕೆಲಸ ಮಾಡಿಸಬಾರದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳಲ್ಲಿ ಕಾವಲುಗಾರರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಽಕಾರಿಗಳಾದ ಹುಲಗಪ್ಪ ಚಲವಾದಿ, ರಾಜೇಶ ದೇಶಪಾಂಡೆ, ರಾಜು ಯಾದವಾಡ, ಆನಂದ ಹಾದಿನಮನಿ, ರಾಜು ಮಾದರ ಇತರರು ಇದ್ದರು.