ಹುಮನಾಬಾದ್: ಭಕ್ತ ಕನಕದಾಸರು ಸಮಾಜದಲ್ಲಿ ಜಾತಿ ಭೇದ, ಮೌಢ್ಯತೆ ಹೋಗಲಾಡಿಸಿ ಎಲ್ಲರೂ ಸಮಾನರು ಎಂದು ಕೀರ್ತನೆ ಮೂಲಕ ಜಾಗೃತಿ ಮೂಡಿಸಿದ ಮಹಾತ್ಮರು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಲಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಥೇರ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ೫೩೭ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕುಲ ಕುಲವೆಂದು ಹೂಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ ಎನ್ನುವ ಮೂಲಕ ಜಾತಿ ಸಂಘರ್ಷವನ್ನು ಕೀರ್ತನೆಗಳಿಂದ ಅಂತ್ಯಗೊಳಿಸಲು ಶ್ರಮಿಸಿದ್ದ ಕನಕದಾಸರ ಕೃತಿಗಳಲ್ಲಿ ಸಮಾಜದ ಡೊಂಕು ತಿದ್ದಿ ಸಮಾನತೆಯಿಂದ ಬದುಕುವಂತೆ ಸಾರಿದ ತತ್ವಜ್ಞಾನ ತುಂಬಿ ತುಳುಕಿದೆ. ಕನಕದಾಸರ ಕೀರ್ತನೆಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಸಮಾಜದ ಪ್ರಮುಖರೆಲ್ಲರೂ ಒಂದುಗೂಡಿ ಬಹಳ ಅರ್ಥಪೂರ್ಣವಾಗಿ ಜಯಂತಿ ಆಚರಿಸಿರುವುದು ಕನಕದಾಸರ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಹುಲಜಂತಿಯ ಶ್ರೀ ಮಾಳಿಂಗರಾಯ ಮಹಾರಾಜ ಮಾತನಾಡಿ, ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದಾಗಲೇ ಜಯಂತಿಗೆ ಮಹತ್ವ ಬರುತ್ತದೆ ಎಂದರು.
ಗ್ಯಾರಂಟಿ ಸಮಿತಿ ಜಿಲ್ಲಾಧಕ್ಷ ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸತೀಶ ರಾಂಪುರೆ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕ್ರಮ್, ಪ್ರಮುಖರಾದ ಭಾರತಬಾಯಿ ಶೇರಿಕಾರ, ಅಶೋಕ ಚಳಕಾಪುರೆ, ಸಚಿನ್ ದಾಡಗಿ, ಸಂತೋಷ ಮುಗನೂರ, ಅಫ್ಸರ್‌ಮಿಯಾ, ಓಂಕಾರ ತುಂಬಾ, ಶಿವರಾಜ ಗಂಗಶೆಟ್ಟಿ, ಲಕ್ಷ್ಮಣರಾವ ಬುಳ್ಳಾ, ಕಂಟೆಪ್ಪ ದಾನಾ, ಮಲ್ಲಿಕಾರ್ಜುನ ಮಾಶೆಟ್ಟಿ, ಪ್ರಕಾಶ ಬತಲಿ, ತುಕಾರಾಮ ಚಿದ್ರಿ, ಸೈಯದ್ ಯಾಸೀನ್ ಅಲಿ, ದತ್ತಕುಮಾರ ಚಿದ್ರಿ, ಬಸವರಾಜ ಮೊಳಕೇರಾ, ಬಾಬು ಟೈಗರ್, ಮಲ್ಲಿಕಾರ್ಜುನ ಪ್ರಭಾ, ರಮೇಶ ಡಾಕುಳಗಿ, ಮಲ್ಲಿಕಾರ್ಜುನ ಮಹೇಂದ್ರಕರ, ಶ್ರೀಮಂತ ಪಾಟೀಲ್, ಅಶೋಕ ಕಟ್ಟಿ, ರಾಮಚಂದ್ರ ಡಾಕುಳಗಿ, ವೈಜಿನಾಥ ನಿಪ್ಪಾಣಿ ಇತರರಿದ್ದರು.
ಭವ್ಯ ಮೆರವಣಿಗೆ: ಬೀರಲಿಂಗೇಶ್ವರ ಮಂದಿರದಿಂದ ಪ್ರಮುಖ ರಸ್ತೆ ಮೂಲಕ ಥೇರ್ ಮೈದಾನದವರೆಗೆ ಭಕ್ತ ಕನಕದಾಸ ಭಾವಚಿತ್ರದ ಭವ್ಯ ಮರವಣಿಗೆ ಜರುಗಿತು. ಜಾನಪದ ಕಲಾ ತಂಡಗಳ ಪ್ರದರ್ಶನ ಗಮನಸೆಳೆಯಿತು. ಡೊಳ್ಳು ಕುಣಿತಕ್ಕೆ ರಾಜಶೇಖರ ಪಾಟೀಲ್ ಸೇರಿ ಅನೇಕ ಪ್ರಮುಖರು ಹೆಜ್ಜೆ ಹಾಕಿದರು.