ಜಿಲ್ಲೆ

ಕನಕಟ್ಟಿ ಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಉಪವಲಯ ಅರಣ್ಯಾಧಿಕಾರಿ, ಕೋಲಿ ಕಬ್ಬಲಿಗ ಸಮಾಜದ ಮಹೇಶ ಕನಕಟ್ಟಿ ಕೊಲೆ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿ ಮುಖಂಡ ಶರಣಪ್ಪ ತಳವಾರ ಒತ್ತಾಯಿಸಿದರು.
ದುಷ್ಕರ್ಮಿಗಳು ಜೂ.೫ರಂದು ರಾತ್ರಿ ಶಹಾಪುರ ನಗರದ ಹೊರ ವಲಯದಲ್ಲಿರುವ ಮೋಟಗಿ ಬಾರ್ ಮತ್ತು ರೆಸ್ಟೋರೆಂಟ್ ಬಳಿಯಲ್ಲಿ ಕಟ್ಟಿಗೆಯಿಂದ ಹೊಡೆದು ಮಹೇಶ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಿಸಿ ಟಿವಿಯಲ್ಲಿ ಕೊಲೆ ದೃಶ್ಯ ಸೆರೆಯಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ೧೦ ದಿನವಾದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಜೂ.೧೫ ರಂದು ಶಹಾಪುರ ತಾಲೂಕಿನ ಸಮಾಜದವರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದಾಗ ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಹೋರಾಟಗಾರರ ಒತ್ತಾಯಕ್ಕೆ ಮಣಿದು ಕೊಲೆ ಪ್ರಕರಣ ಎಂದು ದಾಖಲಿಸಿ ಐದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆರೋಪಿಗಳನ್ನು ಬಂಧಿಸಿದರೆ ಸಾಲದು, ಕೊಲೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಗಳ ಬಂಧನವಾಗಬೇಕು. ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಸಿಪಿಐಯನ್ನು ವಜಾ ಮಾಡಬೇಕು. ಮೋಟಗಿ ಬಾರ್ ಮತ್ತು ರೆಸ್ಟೋರೆಂಟ್ ಉದ್ದಿಮೆದಾರರ ಲೈಸೆನ್ಸ್ ಮುಟ್ಟುಗೋಲು ಹಾಕಿ ಮುಚ್ಚಬೇಕು. ಹೋಟೆಲ್ ಮಾಲೀಕರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಕೊಲೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಮÊತ ಕುಟುಂಬಕ್ಕೆ ಸರ್ಕಾರದಿಂದ ೫೦ ಲP್ಷÀ ರೂ. ಪರಿಹಾರ ನೀಡಬೇಕು ಮತ್ತು ಅರಣ್ಯ ವಲಯ ಮೇಲಾಧಿಕಾರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ವಾರದಲ್ಲಿ ಬೇಡಿಕೆ ಈಡೇರಿಸದಿದ್ದರೆ ಅಧಿವೇಶನದ ವೇಳೆ ಸಮಾಜದ ಮುಖಂಡರು ಹಾಗೂ ಮÊತ ಕುಟುಂಬಸ್ಥರ ಜತೆಗೆ ಬೆಂಗಳೂರಿಗೆ ನಿಯೋಗ ತೆರಳಿ ಸಿಎಂ ಮತ್ತು ಗÊಹ ಮಂತ್ರಿಯನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.
ಬಸವರಾಜ ಬೂದಿಹಾಳ, ಬಸವರಾಜ ಹರವಾಳ, ವಿದ್ಯಾಧರ ಮಂಗಳೂರೆ, ರವೀಂದ್ರಕುಮಾರ ಡೊಂಗರಗಾAವ, ಪಿತಾಂಬರ ಕಲಗುರ್ತಿ, ಅಮÊತ ಡಿಗ್ಗಿ, ಮÊತನ ಪತ್ನಿ ನಾಗವೇಣಿ ಕನಕಟ್ಟಿ ಇತರರಿದ್ದರು.