ಜಿಲ್ಲೆ

ಕನಕ ಜಯಂತಿ: ಗಮನ ಸೆಳೆದ ಮೆರವಣಿಗೆ

ಮೈಸೂರು: ಕನಕದಾಸರ ಜಯಂತಿ ಅಂಗವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಕನಕದಾಸರ ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ತಮಟೆ, ನಗಾರಿ, ಗಾರುಡಿ ಗೊಂಬೆ, ಪೂಜಾಕುಣಿತ, ಕಂಸಾಳೆ ಸೇರಿದಂತೆ ಹತ್ತಾರು ಜಾನಪದ ಕಲಾಪ್ರಕಾರಗಳು ಮೆರುಗು ನೀಡಿದವು.

ಕೆ.ಆರ್.ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ, ನೂರಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ ಮತ್ತು ವಿನೋಬಾ ರಸ್ತೆ ಮಾರ್ಗವಾಗಿ ಸಾಗಿದ ಮೆರವಣಿಗೆ ಕಲಾಮಂದಿರದ ಬಳಿ ಅಂತ್ಯಗೊಂಡಿತು.