Donkey owner fined Rs. 20,000 
ಜಿಲ್ಲೆ

ಕತ್ತೆ ಮಾಲೀಕರಿಗೆ 20 ಸಾವಿರ ರೂ. ದಂಡ

ಜಮಖಂಡಿ: ನಗರದ ಪ್ರಮುಖ ರಸ್ತೆಗಳನ್ನೇ ತಂಗುದಾಣ ಮಾಡಿಕೊಂಡಿದ್ದ ಕತ್ತೆಗಳನ್ನು ನಗರಸಭೆಯ ವಶಕ್ಕೆ ಪಡೆಯಲಾಗಿದೆ. ನಗರದ ಅಶೋಕ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಕೋರ್ಟ್ ರಸ್ತೆ, ಟಿಪ್ಪು ಸುಲ್ತಾನ್ ಸರ್ಕಲ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿದ್ದ ಕತ್ತೆಗಳನ್ನು ವಶಕ್ಕೆ ಪಡೆದಿದ್ದು, ಕತ್ತೆ ಮಾಲೀಕರಿಗೆ 20 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಜ್ಯೋತಿ ಗಿರೀಶ ತಿಳಿಸಿದ್ದಾರೆ.