ಜಿಲ್ಲೆ

ಕಣ್ವ  ವಶಿಷ್ಠ ದೋಖಾ ಸಿಬಿಐ ತನಿಖೆಗೆ ವಹಿಸಲು ನಮೋಶಿ ಒತ್ತಾಯ

ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ನಮೋಶಿ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಸೇರಿದಂತೆ ರಾಜ್ಯದ ಸುಮಾರು ೨೩ ಸಾವಿರ ಜನರಿಗೆ ವಂಚನೆ ಮಾಡಿರುವ ಬೆಂಗಳೂರು ಮೂಲದ ಕಣ್ವ ಸೌಹಾರ್ದ ಸಹಕಾರಿ ನಿಯಮಿತ, ವಶಿಷ್ಠ ಸಹಕಾರಿ ಬ್ಯಾಂಕ್‌ಗಳನ್ನು ದಿವಾಳಿ ಮಾಡಿರುವ ಪ್ರಕರಣ ಕುರಿತು ಸಿಬಿಐ ತನಿಖೆಗೆ ಒಪ್ಪಿಸುವ ಮೂಲಕ ಮೋಸ ಹೋದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಣ್ವದಲ್ಲಿ ಸುಮಾರು ೧,೫೦೦ ಕೋಟಿ ರೂ. ಹಾಗೂ ವಶಿಷ್ಠ ಬ್ಯಾಂಕಿನಲ್ಲಿ ೩೫೦ ಕೋಟಿ ರೂ. ಹಗರಣ ನಡೆದಿದೆ. ದಿವಾಳಿ ಮಾಡಿ ಜನರ ಹಣ ಕೊಳ್ಳೆ ಹೊಡೆದವರೊಂದಿಗೆ ಸರ್ಕಾರ ಶಾಮೀಲಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಣ್ವ ಸಹಕಾರಿಯವರಿಂದ ಕಲ್ಯಾಣ ಕರ್ನಾಟಕ ಭಾಗÀದ ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ವಂಚನೆಗೊಳಗಾಗಿದ್ದಾರೆ. ವಶಿಷ್ಠ ಬ್ಯಾಂಕಿನಿAದಲೂ ಮೋಸಕ್ಕೊಗಾಗಿದ್ದಾರೆ. ಅವರೆಲ್ಲರು ಸೇರಿಕೊಂಡು ಸಂಘಟನೆಯೊAದು ಹುಟ್ಟು ಹಾಕಿ ಹೋರಾಟಕ್ಕೆ ಇಳಿದಿದ್ದು, ಅವರಿಗೆ ಬೆಂಬಲಿಸಿ ಸಾಥ್ ನೀಡುವುದಾಗಿ ಹೇಳಿದರು.
 ರಾಜ್ಯದ ವಿವಿಧ ಜಿ¯್ಲೆಗಳು, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತಿತರರ ರಾಜ್ಯಗಳಲ್ಲಿ ಹಣ ದುರ್ಬಳಕೆ ಆಗಿರುವ ಕುರಿತು ಪೊಲೀಸ್ ಠಾಣೆಗಳಲ್ಲಿ ೪೦ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ. ಕಳೆದ ೧೯೯೦ರಲ್ಲಿ ಶುರುವಾದ ಕಣ್ವ ಸೌಹಾರ್ದ ಸಹಕಾರಿ ನಿಯಮಿತದ ೧೬೫ ಶಾಖೆ ಸ್ಥಾಪಿಸಿ, ಅಂದಾಜು ೨೩ ಸಾವಿರ ಜನರಿಗೆ ಮೋಸ ಮಾಡಿದ್ದಾರೆ.ನಂಜುAಡಯ್ಯ ಎಂಬುವರು ಎಂಡಿಯಾಗಿದ್ದರು ಹೇಳಿದಂತೆ ಅವರ ೧೧೬ ಕೇಸ್ ಎಂದಿದ್ದಾರೆ. ಸರ್ಕಾರ ಸದನದಲ್ಲಿ ತಮಗೆ ನೀಡಿದ ಲಿಖಿತ ಉತ್ತರದಲ್ಲಿ  ೨೧ ಎಫ್‌ಐಆರ್ ದಾಖಲಾಗಿವೆ ಎಂದು ನೀಡಲಾಗಿದೆ. ಇದು ಒಂದಕ್ಕೊAದು ತಾಳೆಯಾಗುತ್ತಿಲ್ಲ ಎಂದು ನಮೋಶಿ ಆರೋಪಿಸಿದರು.
ಸಹಕಾರ ಇಲಾಖೆ ಅಧಿಕಾರಿಗಳ ತಂಡ ತನಿಖೆ ನಡೆಸಿ ೨೦೨೧ರ ಜುಲೈ ೧೯ ರಂದು ವರದಿ ನೀಡಿ ೪೦ ಪ್ರಮುಖ ಅಂಶಗಳ ಉಲ್ಲಂಘನೆ ತಪ್ಪಾಗಿದ್ದು ಉಲ್ಲೇಖಿಸಲಾಗಿದೆ. ಇನ್ನೂ ಹೈಕೋರ್ಟ್ ಸಹ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರೂ ಇದುವರೆಗೂ ಉತ್ತರ ನೀಡಿಲ್ಲ. ಹೈಕೋರ್ಟ್ ನಿರ್ದೇಶನದಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ನೊಂದ  ೪೦೦ ಜನರು ಹಣ ಮರಳಿಸಲಾಗದೆ ಮೃತಪಟ್ಟಿದ್ದಾರೆÉ. ಈ ಪ್ರಕರಣವನ್ನು ಸರ್ಕಾರ  ಗಂಭೀರವಾಗಿ ಪರಿಗಣಿಸಿ ಗುರುರಾಘವೇಂದ್ರ  ಬ್ಯಾಂಕ್ ಜತೆಗೆ ಈ ಎರಡನ್ನು ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ನಮೋಶಿ ಆಗ್ರಹಿಸಿದರು.  ಸುದ್ದಿಗೋಷ್ಠಿಯಲ್ಲಿ ವಂಚನೆಗೊಳಗಾದ ಮುರುಳಿ, ಸಂಗಮೇಶ ಗುಬ್ಬೇವಾಡ, ನಾಗಪ್ಪ ಪಂಚಾಳ, ಚಂದ್ರಶೇಖರ ಮೊದಲಾದವರಿದ್ದರು