ಹುಕ್ಕೇರಿ: ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣುಗಳ ಆರೋಗ್ಯ ಸಂರಕ್ಷಿತವಾಗಿರಿಸಲು, ಕಾಲ ಕಾಲಕ್ಕೆ ತಪಾಸಣೆ ಮಾಡಿಸಲು ಮುಂದಾಗಬೇಕು ಎಂದು ಪಿಕೆಪಿಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಹೇಳಿದರು.
ತಾಲೂಕಿನ ಗುಡಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿದ್ಧಾರ್ಥ ನೇತ್ರಾಲಯ ಮತ್ತು ವಿಜಯಾ ಆರ್ಥೋ ಆಂಡ್ ಟ್ರೌಮಾ ಸೆಂಟರ್ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ.ಸಿದ್ಧಾರ್ಥ ಪೂಜಾರಿ, ಡಾ.ಮನೋಜಕುಮಾರ, ಸಂಘದ ಉಪಾಧ್ಯಕ್ಷ ರಾಯಪ್ಪ ಡೂಗ, ನಿರ್ದೇಶಕ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಅಡಿವೆಪ್ಪ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ ಇತರರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಎಸ್.ಎಸ್.ಮಲ್ಲಾಪೂರೆ ನಿರೂಪಿಸಿದರು.