ಬಾಗಲಕೋಟೆ: ಬಹು ವರ್ಷಗಳಿಂದ ಕಡಿಮೆಯಾಗಿದ್ದ ಕಣ್ಣು ಬೆನೆ ರೋಗ ಮತ್ತೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ಕಂಜೆಕ್ಟಿವೆಟಿಸ್ ವೈರಸ್ ಕಾಟಕ್ಕೆ ಮಕ್ಕಳು, ಹಿರಿಯರು ಸುಸ್ತಾಗಿ ಹೋಗಿದ್ದಾರೆ. ಕಣ್ಣಿನ ಉರಿ, ಊತಕ್ಕೆ ಕೋಟೆನಾಡಿನ ಜನರನ್ನು ಹೈರಾಣ ಆಗಿಸಿದೆ.
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ, ಬಾದಾಮಿ, ಹುನಗುಂದ, ಇಳಕಲ್ಲ, ಗುಳೇದಗುಡ್ಡ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೇ ಕಣ್ಣು ಬೆನೆ ಸಮಸ್ಯೆ ಉಲ್ಭಣವಾಗುತ್ತಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯವು ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆರೋಗ್ಯ ಇಲಾಖೆ ಎಲ್ಲೆಡೆ ಹಣ್ಣಿನ ಇರಿಸಿದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಂಡಿದ್ದ ಮದ್ರಾಸ್ ಐ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾದಂತೆ ತನ್ನ ಪ್ರಭಾವ ಬೀರತೊಡಗಿದೆ. ಮುಖ್ಯವಾಗಿ ಶಾಲಾ ಮಕ್ಕಳಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗುತ್ತಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಲು ಶಾಲಾ ಮುಖ್ಯಸ್ಥರು ಸೂಚನೆ ನೀಡಿದ್ದಾರೆ. ಆದರು ಸಹ ಸೋಂಕು ಹರಡುವಿಕೆ ವೇಗ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಬಾಗಲಕೋಟೆ, ಬೀಳಗಿ ಭಾಗದಲ್ಲಿ ಸೋಂಕು ಪರಿರಿಸುವಿಕೆ ಜಾಸ್ತಿ ಆಗಿರುವುದು ಆರೋಗ್ಯ ಇಲಾಖೆ ಖಾತ್ರಿ ಪಡೆಸಿದೆ.
ರೋಗ ಹರಡುವುದು-ತಡೆಗಟ್ಟುವುದು ಹೇಗೆ?
ಕಂಜೆಕ್ಟಿವೈಟಿಸ್ ವೈರಲ್, ಬ್ಯಾಕ್ಟೀರಿಯಾ, ಅಲರ್ಜಿ ನಾನಾ ರೀತಿಯಲ್ಲಿ ಒಕ್ಕರಿಸಬಹುದು. ಸೋಂಕಿತ ವ್ಯಕ್ತಿಯ ಉಪಯೋಗಿಸುವ ಟವಲ್, ಸೋಪು ಇತ್ಯಾದಿ ವಸ್ತುಗಳು ಸಾಮಾನ್ಯ ಮನುಷ್ಯನಿಗೆ ತಾಕಿದರೇ ಸೋಂಕು ಪಸರಿಸುತ್ತದೆ. ಆರಂಭದಲ್ಲಿ ಕಣ್ಣು ಕೆಂಪಾಗಿ ಊತ, ಉರಿ ಕಾಣಿಸಿಕೊಳ್ಳುತ್ತದೆ. ಎರಡೇ ದಿನದಲ್ಲಿ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸೋಂಕಿತರು ವಿಶೇಷ ಕೊಠಡಿಯಲ್ಲಿರುವುದು, ಅವರು ಬಳಸಿದ ವಸ್ತುಗಳು ಇತರರು ಬಳಸದಂತೆ ಎಚ್ಚರಿಕೆ ವಹಿಸುವುದು, ಸಾಮಾನ್ಯ ಜನರು ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವುದು, ಕಣ್ಣಿಗೆ ಕೈ ತಾಕದಂತೆ ಎಚ್ಚರಿಕೆ ವಹಿಸುವುದು, ಸಣ್ಣ ಗ್ಲಾಸ್ ಅಥವಾ ಇತರೆ ಚಾಳಿಸ(ಕನ್ನಡಕ) ನಿತ್ಯ ಅಚ್ಚಕಟ್ಟಾಗಿ ಬಳಸುವುದು ಮಾಡಿದಲ್ಲಿ ಹರಡುವಿಕೆ ಪ್ರಮಾಣ ಕ್ಷಿಣಿಸಲಿದೆ.
ಸಮಯಕ್ಕೆ ಸರಿಯಾಗಿ ಸೂಕ್ತ ತಪಾಸಣೆ ಅಗತ್ಯ:
ಸಾಮಾನ್ಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುತ್ತದೆ. ಆರಂಭಿಕ ಲಕ್ಷಣ ಕಂಡು ಬಂದಾಗ ನಿರ್ಲಕ್ಷ್ಯ ವಹಿಸಬಾರದು. ಸ್ವಯಂ ಚಿಕಿತ್ಸೆಗೆ ಒಳಗಾಗದೇ ನುರಿತ ವೈದ್ಯರು, ಆಸ್ಪತ್ರೆಗೆ ಭೇಟಿ ನೀಡಬೇಕು. ಮದ್ರಾಸ್ ಐ ಲಕ್ಷಣಗಳು ಇರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಏಕಾಏಕಿ ನಿರ್ಧಾರಕ್ಕೆ ಬಂದು ಕಣ್ಣು ಬೆನೆ ಅಂತಾ ತಿಳಿದು ಔಷಧಿ ಸ್ವೀಕರಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ಡಿಎಚ್‌ಒ ಜಯಶ್ರೀ ಎಮ್ಮಿ ಜಿಲ್ಲೆಯಲ್ಲಿ ಕಣ್ಣು ಬೆನೆ ಸೋಂಕು ಕಂಡು ಬಂದಿದೆ. ದಿನೇ ದಿನೇ ಮದ್ರಾಸ್ ಐ ಹೆಚ್ಚಾಗುತ್ತಿರುವುದು ವರದಿಗಳು ದೃಢಪಡಿಸಿವೆ. ಬಾಗಲಕೋಟೆ, ಬೀಳಗಿ ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ನಿತ್ಯವು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರು ಸಾರ್ವಜನಿಕರು ಮಕ್ಕಳು, ಹಿರಿಯರ ಕಣ್ಣು ಬೆನೆ ಬಂದರೇ ಮನೆಗಳಲ್ಲಿ ಸ್ವಯಂ ಚಿಕಿತ್ಸೆಗೆ ಒಳಗಾಗಬಾರದು. ಸಮೀಪದ ವೈದ್ಯರು, ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ನಮ್ಮ ಕಚೇರಿಯಲ್ಲಿ ಕೆಲವು ಸಿಬ್ಬಂದಿಗಳಿಗೆ ಮದ್ರಾಸ್ ಐ ಕಂಡು ಬಂದ ಹಿನ್ನಲೆಯಲ್ಲಿ ರಜೆಗೆ ಸೂಚಿಸಿದ್ದೇನೆ. ಸೋಂಕಿತರು ಐಸೋಲೆಟ್ ಆಗವುದು ಉತ್ತಮ. ಇಲ್ಲವಾದಲ್ಲಿ ಕುಟುಂಬದವರಿಗೂ ಅಲರ್ಜಿ ಬರುವ ಸಾಧ್ಯತೆ ಹೆಚ್ಚು ಎಂದು ವಿಜಯವಾಣಿಗೆ ತಿಳಿಸಿದರು.