ಬಾಗಲಕೋಟೆ: ಕಣ್ಣಿನ ಸಮಸ್ಯೆಗಳಿಗೆ ಸ್ಥಳಿಯ ಕ್ರಿಯಾಕಲ್ಪಗಳಂತಹ ಚಿಕಿತ್ಸೆಯೊಂದಿಗೆ ಕಣ್ಣಿನ ವ್ಯಾಯಾಮ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ಎಸ್.ಜೆ.ಜಿ ಆಯುರ್ವೇಧ ವೈಧ್ಯಕೀಯ ಮಹಾವಿದ್ಯಾಲಯದ ಶಾಲಾಕ್ಯಾ ವಿಭಾಗದ ಮುಖ್ಯಸ್ಥರಾದ ಡಾ.ವೀರಯ್ಯ ಹಿರೇಮಠ ಹೇಳಿದರು.
ಅವರು ಬಿ.ವಿ.ವಿ.ಎಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಶಾಲಾಕ್ಯ ತಂತ್ರ ವಿಭಾಗದಿಂದ ಸಂಘದ ನೂತನ ಸಭಾಭವನದಲ್ಲಿ ಶುಕ್ರವಾರ ನಡೆದ ಶಾಲಾಕ್ಯ ದರ್ಪಣ ೨೦೨೪ ರ ಪ್ರಾಯೋಗಿಕ ಅಂಶಗಳ ಕುರಿತು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಕಣ್ಣಿನ ಸಮಸ್ಯಗಳಿಗೆ ಆಯುರ್ವೇದಲ್ಲಿ ವಿಶೇಷವಾಗಿ ಶಾಲಾಕ್ಯ ತಂತ್ರದಲ್ಲಿ ಸಂಶೋಧನೆ ಅತಿ ಮುಖ್ಯವಾಗಿದ್ದು, ಇತ್ತಿಚಿಗೆ ಲ್ಯಾಪ್ ಟಾಪ್ ಮೋಬೈಲಗಳಂತಹ ಯಾಂತ್ರಿಕ ವಸ್ತುಗಳನ್ನು ಬಳಸುವ ಜನರಿಗೆ ಕಣ್ಣು ನೋವುಗಳಂತಹ ಸಮಸ್ಯಗೆ ಬರುವುದರಿಂದ ಅವರಿಗೆ ಸ್ಥಳಿಯ ಕ್ರಿಯಾಕಲ್ಪಗಳಂತಹ ಚಿಕಿತ್ಸೆಯನ್ನು ನೀಡುವುದುರ ಜೋತಗೆ ಕಣ್ಣಿನ ವ್ಯಾಯಾವನ್ನು ಮಾಡಿಸುವುದು ಅಗತ್ಯವಾಗಿದೆ, ಕಾರ್ಯಾಗಾರದಲ್ಲಿ ಶಾಲಾಕ್ಯ ತಂತ್ರದಲ್ಲಿನ ವಿದ್ದಕರ್ಮ, ಮರ್ಮಚಿಕಿತ್ಸೆ, ನೇತ್ರ ಕ್ರೀಯಾಕಲ್ಪಗಳ ಬಗ್ಗೆ ಪ್ರಾಯೋಗಿಕವಾಗಿ ಉಪನ್ಯಾಸ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಇನ್ನೂರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುಣೆಯ ಸುದರ್ಶನ ಕಣ್ಣಿನ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುರೇಶ ವಾಘ ಅವರು ಮಾತನಾಡಿ ವೈದ್ಯಕೀಯ ವಿಜ್ಞಾನದಲ್ಲಿ ಏಕೀಕರಣದ ಅಗತ್ಯವಿದೆ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕಾತ್ಮ ಕ್ಲೀನಿಕಲ್ ಸರ್ಟಿಪೈಡ್ ಕೋರ್ಸಗಳಾದಂತಹ ಅಡಿಯೋಲಜಿ, ಸ್ಪೀಚ್ ಆಂಡ ಹಿಯರಿಂಗ್‌ಗಳನ್ನು ಮಾಡಿಕೋಳ್ಳಲು ಸಲಹೇ ನೀಡಿದರು, ಕಣ್ಣಿನ ಸಮಸ್ಯಗೆಳನ್ನು ಆಯುರ್ವೇಧಲ್ಲಿ ಚಿಕಿತ್ಸೆ ನೀಡುವಾಗ ಬರುವಂತ ಅಡತಡೆಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರಲ್ಲದೆ. ವರ್ತಮಾನದ ದಿನಗಳಲ್ಲಿ ದಾಖಲೆಗಳು ಮತ್ತು ಸಂಶೋಧನೆ ಮೂಲಕ ಹೊಸ ಹೊಸ ಪದ್ದತಿಗಳಲ್ಲಿ ಚಿಕ್ಕಿತ್ಸೆ ನೀಡುಬೇಕಾಗಿದೆ, ಈ ಸೂಕ್ತ ಸಮಯದಲ್ಲಿ ಕಾರ್ಯಾಗಾರವನ್ನು ಹಮ್ಮಿಕೋಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದ ಕಾಲೇಜುಗಳ ಆಡಳಿತ ಮಂಡಳಿ ಕಾಯಾಧ್ಯಕ್ಷರಾದ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ ಇಂಥಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸರ್ವಾಂಗಿಣ ಜ್ಞಾನದ ಬೇಳವಣಿಗೆಗೆ ಸಹಕಾರಿಯಾಗಲಿವೆ, ಸುಮಾರ ೩೦ ಜನ ಉಪನ್ಯಾರಕರು, ೨೫ ಕಾಲೇಜುಗಳು ಭಾಗವಹಿಸಿದ್ದು, ಸುಮಾರ ೬೦ಕ್ಕೂ ಹೆಚ್ಚು ಪ್ರಬಂದಗಳು ಮಂಡನೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಪ್ರಾಚಾರ್ಯ ಡಾ.ಎಂ.ಎಸ್.ಹಿರೇಮಠ ಪ್ರಸ್ತಾವಿಕ ಮಾತನಾಡಿದರು, ಕಾರ್ಯಕ್ರಮ ಸಂಯೋಜಕಿ ಡಾ.ಪಿ.ಎಸ್.ಪೋಲಿಸ ಪಾಟೀಲ ವೇದಿಕೆ ಮೇಲೆ ಇದ್ದರು, ಡಾ. ಜಿ.ಎಸ್. ಕುಲಕರ್ಣಿ ಸ್ವಾಗತಿಸಿದರು, ಸಂಯೋಜನಾ ಸದಸ್ಯರಾದ ಡಾ. ವಿ.ಜಿ.ಹಿರೇಮಠ ವಂದಿಸಿದರು, ಡಾ.ಚೈತ್ರಾ ನಡುವಿನಮನೆ ಹಾಗೂ ಡಾ.ಪ್ರಮೋಧ ಕಾರ್ಯಕ್ರಮ ನಿರುಪಿಸಿದರು.
ವಿಶೇಷ ಉಪನ್ಯಾಸ: ವಿದ್ದಕರ್ಮ, ಮರ್ಮಚಿಕಿತ್ಸೆ, ನೇತ್ರ ಕ್ರೀಯಾಕಲ್ಪಗಳ ಬಗ್ಗೆ ಪ್ರಾಯೋಗಿಕವಾಗಿ ಕೋಯಂಬುತ್ತಿರನ ಆಯುರ್ವೇಧಿಕ ಕಾಲೇಜಿನ ಪ್ರಾಧ್ಯಪಕರಾದ ಡಾ.ಪುಂಡರಿಕ್ಷ ರಾವ್, ವಿದ್ವಾಂನ ಆರ್.ವಿ.ಗೊಗಠೆ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕುಮಾರ ದೇಶಮುಖ, ಮುಡುಬಿದರೆಯ ಡಾ.ಸೈಪುದ್ದೀನ ಗುರಕ್ಕಲ್ ಅವರುಗಳು ಗೋಷ್ಠಿಯ ವಿಶೇಷ ಉಪನ್ಯಾಸ ನೀಡಿದರು.