ರಾಯಚೂರು ತಾಲೂಕಿನ ಮಲಯಾಬಾದ್‌ನ ಎನ್.ಹುಸೇನ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಅಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್, ತಾಲೂಕು ಅಧ್ಯಕ್ಷ ಶೇಖ್ ಮಹೆಬೂಬ್, ಭಾರತ ಸೇವಾದಳದ ವಿಭಾಗ ಸಂಘಟಕ ವಿದ್ಯಾಸಾಗರ ಚಿನಮಗೇರಿ, ವೈದ್ಯರಾದ ಅರುಣಕುಮಾರ, ಡಾ.ನಾರಾಯಣ, ಡಾ.ಜ್ಯೋತಿ, ಮುಖ್ಯಗುರು ರೆಡ್ಡಪ್ಪ ಇದ್ದರು. 
ಜಿಲ್ಲೆ

ಕಣ್ಣಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಶಿಕ್ಷಕರು ಕಣ್ಣಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಪ್ರತಿ ವರ್ಷ ತಪಾಸಣೆ ನಡೆಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಅಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್ ಹೇಳಿದರು.
ತಾಲೂಕಿನ ಎನ್.ಹುಸೇನ್ ಪಬ್ಲಿಕ್ ಶಾಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಭಾರತೀಯ ಸೇವಾ ದಳದಿಂದ ಶಿಕ್ಷಕರು ಮತ್ತು ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಕಣ್ಣಿನ ಆರೋಗ್ಯದ ಬಗ್ಗೆ ಬಹಳಷ್ಟು ಜನರು ನಿರ್ಲಕ್ಷ ವಹಿಸುತ್ತಾ ಬರುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಜೀವ ಹೋದ ನಂತರ ನಮ್ಮ ದೇಹವೂ ಮಣ್ಣು ಸೇರುತ್ತದೆ. ಆದರೆ ನಮ್ಮ ನಿಧನದ ನಂತರವೂ ಕೆಲವು ಅಂಗಾಗಗಳು ಉಪಯೋಗಕ್ಕೆ ಬರುತ್ತವೆ. ಹೀಗಾಗಿ ಕಣ್ಣು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಬೆಳಕಾಗುವಂತಹ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ತಿಳಿಸಿದರು.
ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ಶೇಖ್ ಮಹೆಬೂಬ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಸೇವಾದಳದ ವಿಭಾಗ ಸಂಘಟಕ ವಿದ್ಯಾಸಾಗರ ಚಿನಮಗೇರಿ, ನವೋದಯ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಬಿ.ದೇವಾನಂದ, ವೈದ್ಯರಾದ ಅರುಣಕುಮಾರ, ಡಾ.ನಾರಾಯಣ, ಡಾ.ಜ್ಯೋತಿ, ಮುಖ್ಯಗುರು ರೆಡ್ಡಪ್ಪ, ದಂಡಪ್ಪ ಬಿರಾದರ ಉಪಸ್ಥಿತರಿದ್ದರು.