ಜಿಲ್ಲೆ

ಕಣ್ಣಿನ ಕಾಳಜಿ, ಮುಂದಿನ ಚಿಕಿತ್ಸೆ ಮಾಹಿತಿ

ಬನ್ನೂರು: ಬನ್ನೂರಿನಲ್ಲಿ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬಂದ ಶಿಬಿರಾರ್ಥಿಗಳಿಗೆ ಬುಧವಾರ ರೋಟರಿ ಮಾಜಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಕಣ್ಣಿನ ಕಾಳಜಿ ಮತ್ತು ಮುಂದಿನ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಕೆ.ರಾಜೇಶ್‌ಕುಮಾರ್, ವಿಜಯ್, ಸಾಗರ್, ಮಹೇಶ್, ಮೂರ್ತಿ, ಬೇವಿನಹಳ್ಳಿ ಕುಸುಮಾ, ಹೇಮಂತ್‌ಕುಮಾರ್, ಸುಖಿ, ಯಾಸೀನ್, ನಂಜುಂಡಸ್ವಾಮಿ, ಸುರೇಶ್ ಇತರರು ಇದ್ದರು.