ಕಲಬುರಗಿ: ಬಸವ ಜಯಂತಿ ನಿಮಿತ್ತ ನಗರದ ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ಅನ್ನ ದಾಸೋಹ ಮತ್ತು ಸಂಜೆ ಮಜ್ಜಿಗೆ ಹಾಗೂ ಕುಡಿಯುವ ನೀರು ವಿತರಿಸಲಾಯಿತು.
ಶಾಸಕ ಅಲ್ಲಮ ಪ್ರಭು ಪಾಟೀಲ್ ಉದ್ಘಾಟಿಸಿ ಮಾತನಾಡಿ, ಬಸವೇಶ್ವರರ ಜಯಂತಿಗೆ ಸರ‍್ಥಕತೆಯ ಸ್ರ‍್ಷವನ್ನು ಶ್ರೀ ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆ ಮಾಡುತ್ತಿದೆ. ಭಕ್ತಿಯಿಂದ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ಅನ್ನ ದಾಸೋಹ ಮತ್ತು ಸಂಜೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವಿತರಣೆಯೂ ಪುಣ್ಯದ ಕೆಲಸ ಎಂದು ಹೇಳಿದರು.
ಆಸ್ಪತ್ರೆ ಮುಖ್ಯಸ್ಥ ಡಾ.ವಿಶ್ವನಾಥ ರೆಡ್ಡಿ ಮಾತನಾಡಿ, ಬಸವಣ್ಣನವರ ತತ್ವಗಳಿಗೆ ಅನುಗುಣವಾಗಿ ಸೇವೆ ಮಾಡುವುದೇ ನಮ್ಮ ರ‍್ತವ್ಯ. ಇಂತಹ ಕರ‍್ಯಕ್ರಮಗಳು ಸಮಾಜದಲ್ಲಿ ಬಾಂಧವ್ಯ ಹಾಗೂ ಮಾನವೀಯತೆ ಬೆಳೆಸಲು ಸಹಕಾರಿ ಎಂದು ಹೇಳಿದರು.
ಡಾ.ರಾಜಶ್ರೀ ರೆಡ್ಡಿ ಮಾತನಾಡಿ, ದಾಸೋಹದ ಮೂಲಕ ಶ್ರೀ ಬಸವಣ್ಣನವರ "ಜೀವರ ಕ್ಷೇಮವೇ ಪರಮ ರ‍್ಮ" ಎಂಬ ತತ್ವ ಅಳವಡಿಸಿಕೊಂಡು ಪ್ರತಿ ತಿಂಗಳು ಸುಮಾರು ೨೦೦ ಕ್ಕೂ ಹೆಚ್ಚು ಉಚಿತ ಶಸ್ತ್ರ ಚಿಕಿತ್ಸೆ ಮತ್ತು ೧೦೦೦ ಕ್ಕೂ ಹೆಚ್ಚು ಜನರ ಉಚಿತ ಕಣ್ಣಿನ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಿಂದ ೨೧ ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಅನ್ನ ದಾಸೋಹದಲ್ಲಿ ಸಾವಿರಾರು ಜನರು ಪ್ರಸಾದ ಸ್ವೀಕರಿಸಿದರು. ಸಂಜೆಯಲ್ಲಿ ಮೆರವಣಿಗೆಯಲ್ಲಿ ಸಾವಿರಾರು ಜನರಿಗೆ ತಂಪಾದ ಮಜ್ಜಿಗೆ ಮತ್ತು ಮಿನರಲ್ ವಾಟರ ಬಾಟಲ್ ಹಂಚಲಾಯಿತು. ಆಸ್ಪತ್ರೆ ವ್ಯವಸ್ಥಾಪಕ ನರ‍್ದೇಶಕ ಡಾ.ಸಿದ್ದಲಿಂಗ ರೆಡ್ಡಿ, ಡಾ.ರಾಜೇಶ್ವರಿ ರೆಡ್ಡಿ ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.