ಬಾಗಲಕೋಟೆ ನಗರದ ಬನಶಂಕರಿ ಕಣ್ಣಿನ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೇತ್ರಾಧಿಕಾರಿಗಳ ದಿನಾಚರಣೆ ಕಾರ್ಯಕ್ರಮ ನೇತ್ರಾಧಿಕಾರಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷೆ ವನಜಾಕ್ಷಿ ಬಿದರಿ, ಡಾ.ಶ್ರವಣ ಮಾಸೂರಕರ ದೀಪ ಬೆಳಗಿಸಿದರು. ನೇತ್ರಾಧಿಕಾರಿಗಳ ಜಿಲ್ಲಾಧ್ಯಕ್ಷ ಎನ್.ಎಚ್. ಕಿತ್ತಲಿ, ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ ಬಿ., ಡಾ.ಗಿರೀಶ ಮಾಸೂರಕರ ಇತರರು ಇದ್ದರು. 
ಜಿಲ್ಲೆ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಬಾಗಲಕೋಟೆ: ದೇಹದ ಎಲ್ಲ ಭಾಗದ ಜೊತೆಗೂ ಕಣ್ಣು ಮಹತ್ವ ಸ್ಥಾನ ಪಡೆದುಕೊಂಡಿದೆ. ಅದರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ ಬಿ. ಹೇಳಿದರು.

ನಗರದ ಬನಶಂಕರಿ ಕಣ್ಣಿನ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೇತ್ರಾಧಿಕಾರಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಆಹಾರ ಪದ್ಧತಿಯಲ್ಲಿಯೂ ಕಣ್ಣಿನ ಆರೋಗ್ಯ ಅಡಗಿದೆ. ರಕ್ತದ ಒತ್ತಡ, ಮಧುಮೇಹ ಸಂದರ್ಭದಲ್ಲಿಯೂ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಕಾಲ ಕಾಲಕ್ಕೆ ಪರೀಕ್ಷಿಸಿಕೊಳ್ಳಬೇಕು ಎಂದರು.

ಬನಶಂಕರಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಗಿರೀಶ ಮಾಸೂರಕರ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರವಣ ಮಾಸೂರಕರ, ಡಾ.ಉಲ್ಕಾ ಮಾಸೂರಕರ, ಸಂಧ್ಯಾ ಮಾಸೂರಕರ, ನೇತ್ರಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಎಚ್. ಕಿತ್ತಲಿ, ಉಪಾಧ್ಯಕ್ಷೆ ವನಜಾಕ್ಷಿ ಬಿದರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಬಿ.ವಿ.ತೊರಗಲ್ಲ ಇದ್ದರು. ಎಚ್.ಪಿ. ನಾಯಕ ನಿರೂಪಿಸಿದರು. ಎಸ್.ಎಸ್. ಕಮತಗಿ ವಂದಿಸಿದರು.