ಕಲಬುರಗಿ: ನಗರದ ೩೫ ಕೇಂದ್ರಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರಿ ಹುz್ದÉಗಳ ಪೂರ್ವಭಾವಿ ಪರೀಕ್ಷೆ ಮಂಗಳವಾರ ಸುಸೂತ್ರವಾಗಿ ನಡೆಯಿತು.
ಬೆಳಗ್ಗಿನ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ೭೫೦೦ ಅಭ್ಯರ್ಥಿಗಳು ಹಾಜರಿದ್ದು, ೪,೪೪೨ ಅಭ್ಯರ್ಥಿಗಳು ಗೈರಾಗಿದ್ದರು. ಮಧ್ಯಾಹ್ನ ೭,೪೭೨ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ೪,೪೬೪ ಅಭ್ಯರ್ಥಿಗಳು ಗೈರಾಗಿದ್ದರು. ಪೂರ್ವಭಾವಿ ಪರೀಕ್ಷೆಗೆ ೧೧,೯೪೨ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು ಎಂದು ಡಿಡಿಪಿಐ ಸೂರ್ಯಕಾಂತ ಮದಾನೆ ತಿಳಿಸಿz್ದÁರೆ.
ಬಿಗಿ ಪೊಲೀಸ್ ಬಂದೋಬಸ್ತ್: ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿ ನಾಲ್ಕು ಕೇಂದ್ರಕ್ಕೆ ಒಬ್ಬ ಗ್ರೂಪ್ ಎ ವೃಂದದ ಅಧಿಕಾರಿ ವೀಕ್ಷಕ, ಪ್ರಾಂಶುಪಾಲರನ್ನು ಸ್ಥಳೀಯ ನಿರೀಕ್ಷಣಾಧಿಕಾರಿಯಾಗಿ ನಿಯೋಜಿಸಲಾಗಿತ್ತು.
ಅಭ್ಯರ್ಥಿಗಳ ಕಿವಿ ತಪಾಸಣೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಅಭ್ಯರ್ಥಿಗಳ ಹಾಲ್ ಟಿಕೆಟ್ ಪರಿಶೀಲಿಸಿ, ಲೋಹ ಶೋಧಕಗಳ ಮೂಲಕ ಶೋಧಿಸಿದರು. ಬ್ಯಾಗ್‌ಗಳು, ಮೊಬೈಲ್‌ಗಳನ್ನು ಪರೀಕ್ಷಾ ಕೊಠಡಿಯಿಂದ ದೂರದಲ್ಲಿ ಇರಿಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಯಿತು.
ಅಕ್ರಮ ತಡೆಗಾಗಿ ವಸ್ತç ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಕಿವಿ, ಅಂಗಿಯ ಕಾಲರ್ ತಪಾಸಿಸಲಾಯಿತು. ಮಹಿಳಾ ಅಭ್ಯರ್ಥಿಗಳ ಮೂಗುತಿ, ಮೂಗುಬಟ್ಟು, ಮೂಗುನತ್ತು, ಕಿವಿ ಓಲೆ ತೆಗೆಸಲಾಯಿತು. ಉದ್ದನ ತೋಳಿನ ಅಂಗಿ, ಹೆಚ್ಚು ಜೇಬುಗಳಿರುವ ಪ್ಯಾಂಟ್, ಅಂಗಿ ಧರಿಸುವುದು ನಿಷೇಧಿಸಲಾಗಿತ್ತು. ಚಪ್ಪಲಿ, ಶೂಗಳನ್ನು ಧರಿಸಿ ಕೂರಲು ಅನುಮತಿಸಲಿಲ್ಲ. ಪೊಲೀಸ್ ಕಣ್ಗಾವಲು ಇಡಲಾಗಿತ್ತು.
ನಗರದಲ್ಲಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಶ್ನೆ ಪತ್ರಿಕೆಗಳು ಹಾಗೂ ಒಎಂಆರ್ ಶೀಟ್ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ೩೪ ಕೇಂದ್ರಕ್ಕೆ ಒಂದರAತೆ ೧೨ ರೂಟ್ ಮಾಡಲಾಗಿತ್ತು. ಕೇಂದ್ರಗಳ ವೀP್ಷÀಕರು ಹಾಗೂ ಸ್ಥಳೀಯ ನಿರೀP್ಷÀಣಾಧಿಕಾರಿ ಸಮ್ಮುಖದಲ್ಲಿ ಒಎಂಆರ್ ಶೀಟ್‌ಗಳನ್ನು ಅಂಚೆ ಮೂಲಕ ಕೆಪಿಎಸ್‌ಸಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದರು.