ಬಾಗಲಕೋಟೆಯ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು. 
ಜಿಲ್ಲೆ

ಕಣವಿ ವೀರಭದ್ರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ

ಬಾಗಲಕೋಟೆ: ಪಾಕಿಸ್ತಾನದ ವಿರುದ್ಧ ಯುದ್ಧ ನಡೆದರೆ ಭಾರತ ಜಯಶಾಲಿ ಆಗಲಿ, ನಮ್ಮ ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೆÊರ್ಯ ಬಲಗೊಳ್ಳಲಿ ಹಾಗೂ ಯೋಧರು ಮತ್ತು ಅವರ ಕುಟುಂಬದವರಿಗೆ ದೇವರ ಅನುಗ್ರಹ ಸದಾ ಇರಲೆಂದು ಪ್ರಾರ್ಥಿಸಿ ಬಾಗಲಕೋಟೆ ನಗರ ಬಿಜೆಪಿ ಮಂಡಳದ ವತಿಯಿಂದ ಇಲ್ಲಿನ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಂಗಳಾರತಿ ಮಾಡಿಸಿ, ಯೋಧರಿಗೆ ಶುಭ ಕೋರಲಾಯಿತು.

ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಪಾಕಿಸ್ತಾನದ ಜೊತೆ ಇದು ಭಾರತದ ಕೊನೆಯ ಯುದ್ಧವಾಗಲಿದೆ. ಕಾರಣ ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದ ಕಿತ್ತುಹಾಕುವ ಸಂಕಲ್ಪವನ್ನು ನಮ್ಮ ಸೈನಿಕರು ಮಾಡಿದ್ದಾರೆ.ಉಗ್ರರ ೯ ಅಡಗು ತಾಣಗಣನ್ನು ದ್ವಂಸ ಮಾಡಿರುವ ನಮ್ಮ ಸೈನಿಕರನ್ನು ಎಷ್ಟು ಪ್ರಶಂಶೆ ಮಾಡಿದರು ಕಡಿಮೆ. ಯಾವುದೆ ನಾಗರಿಕರನ್ನು ಹೊಡಿಯದೆ ಬರಿ ಉಗ್ರ ಹಾಗೂ ಉಗ್ರರ ಕ್ಯಾಂಪಗಳ ಮೇಲೆ ದಾಳಿ ಮಾಡಿದ್ದು ಇಡಿ ಜಗತ್ತೆ ನಮ್ಮ ಕಾರ್ಯವನ್ನು ಮೆಚ್ಚಿಕೊಳ್ಳುತ್ತಿದೆ. ಇದೀಗ ಇಡೀ ಜಗತ್ತು ಭಾರತದ ಜೊತೆಗೆ ಇದೆ. ಮೋದಿ ಅವರು ಹೆಚ್ಚು ವಿದೇಶ ಪ್ರವಾಸ ಮಾಡುತ್ತಾರೆ ಎಂದು ಟೀಕಿಸುತ್ತಿದ್ದವರಿಗೆ ಇದೀಗ ಯಾಕೆ ಎನ್ನುವುದು ಗೊತ್ತಾಗಿರುತ್ತದೆ. ಇಡೀ ಜಗತ್ತು ಇವತ್ತು ಭಾರತದ ಜೊತೆಗೆ ನಿಂತಿದೆ ಎಂದರೆ ಇದಕ್ಕೆ ಮೋದಿ ಅವರು ವಿದೇಶಗಳ ಜೊತೆ ಇರುವ ಉತ್ತಮ ಸಂಬAಧ ಕಾರಣ. ನಾವೆಲ್ಲ ಭಾರತದೊಳಗಿನ ಅನೇಕ ದೇಶದ್ರೋಹಿಗಳ ವಿರುದ್ದವವು ಹೋರಾಡಬೇಕಿದೆ. ಮುಂಬರುವ ದಿನಗಳಲ್ಲಿ ಭಯೋತ್ಪಾದನೆ ಎನ್ನುವ ಪದವೇ ನಿರ್ಣಾಮವಾಗಬೇಕಿದೆ ಎಂದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೋತ್ತಾಗಿದೆ. ೭೫ ವರ್ಷಗಳಿಂದ ಈ ಮಗ್ಗಲ ಮುಳ್ಳು ಪಾಕಿಸ್ತಾನ ಒಂದಿಲ್ಲಾ ಒಂದು ಕಾರಣದಿಂದ ಭಾರತ ತಂಟೆಗೆ ಬರುತ್ತಿತ್ತು. ಆದರೆ, ಇವತ್ತು ಸತ್ತ ಹಾವಿನಂತೆ ಆಗಿದೆ ಎಂದು ಹೇಳಿದರು.

ಪಾಕಿಸ್ತಾನ ಒಂದು ದೇಶ ಎಂಬ ಭಾವನೆ ಇಲ್ಲವಾಗಿದೆ. ನಮ್ಮ ಪ್ರಧಾನ ಮಂತ್ರಿಗಳು ಅತಿ ಸೂಕ್ಷಾ÷್ಮತಿ ಸೂಕ್ಷ÷್ಮ ವಿಚಾರಗಳನ್ನು ತೆಗೆದುಕೊಂಡು, ಎಲ್ಲ ರೀತಿ ದಾಳಿಯನ್ನು ಭಾರತ ಮಾಡಿದೆ. ಪಾಕಿಸ್ತಾನದ ಕೆಲ ನಗರಗಳ ಮೇಲೆ ದಾಳಿ ಮಾಡಿ ಅವರಿಗೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದೆ. ಈ ಸಲ ಮಾತ್ರ ಪಾಕಿಸ್ತಾನ ಛಿದ್ರ ಛಿದ್ರವಾಗುವಲ್ಲಿ ಎರಡು ಮಾತಿಲ್ಲ. ಪಾಕಿಸ್ತಾನದ ಹುಟ್ಟಡಗಿಸುತ್ತಾರೆ ಎನ್ನುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಂ.ಎಸ್.ದಡ್ಡೆನವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ರಾಜು ನಾಯ್ಕರ, ಯಲಪ್ಪ ನಾರಾಯಣಿ, ಭಾಗೀರತಿ ಪಾಟೀಲ, ಭುವನೇಶ್ವರಿ ಕುಪ್ಪಸ್ತ, ಲಕ್ಷಿ÷್ಮÃ ನಾರಾಯಣ ಕಾಸಟ, ಬಸವರಾಜ ಯಂಕAಚಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ ಮತ್ತಿತರರು ಇದ್ದರು.