ಪಾತಪಾಳ್ಯ: ವಿವಿಧ ಬೇಡಿಕೆಗಳನ್ನು ನೆರವೇರಿಸಬೇಕೆಂದು ಸಿಪಿಎಂ ಕಾರ್ಯಕರ್ತರು ತೋಳ್ಳಪಲ್ಲಿ ಗ್ರಾಪಂ ಮುಂಭಾಗದಲ್ಲಿ ಶನಿವಾರ ಪ್ರತಿಭಟಿಸಿ ಪಿಡಿಒ ವೆಂಕಟರವಣಪ್ಪಗೆ ಮನವಿ ಸಲ್ಲಿಸಿದರು. ಕೃಷಿಕೂಲಿ ಸಂದ ರಾಜ್ಯ ಸಮಿತಿ ಸದಸ್ಯ ಎಲ್.ವೆಂಕಟೇಶ್ ಮಾತನಾಡಿ, ಅ.2ರ ನಂತರ ಕಡ್ಡಾಯವಾಗಿ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಬೇಕು. ನರೇಗಾ ಯೋಜನೆಯಡಿ ಫಾರಂ ನಂ.6 ಸಲ್ಲಿಸಿದವರಿಗೆ ಕೂಡಲೇ ಕೆಲಸ ನೀಡಿ ನಿಗದಿತ ಸಮಯಕ್ಕೆ ಹಣ ಪಾವತಿಸಬೇಕು. ನಿವೇಶನ&ಮನೆ ರಹಿತರನ್ನು ಗುರುತಿಸಿ ಫಲಾನುಭವಿಗಳಿಗೆ ನಿವೇಶನ&ಮನೆ ಸೌಲಭ್ಯ ಕಲ್ಪಿಸಬೇಕು. ಬಾಕಿ ಇರುವ ಮನೆ ಬಿಲ್ ಪಾವತಿಸಬೇಕು. ಕೇರಳ ಮಾದರಿಯಂತೆ ಪ್ರತಿ ಫಲಾನುಭವಿಗಳಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಅನುದಾನ ನೀಡಬೇಕು. ಎಸ್ಟಿ, ಎಸ್ಸಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನ ಅರ್ಹರಿಗೆ ಒದಗಿಸಬೇಕು ಎಂದರು.
ಮನವಿ ಸ್ವೀಕರಿಸಿದ ಪಿಡಿಒ ವೆಂಕಟರವಣಪ್ಪ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.