ಜಿಲ್ಲೆ

ಕಡೆಯ ಶ್ರಾವಣ ಶನಿವಾರ; ಶ್ರೀ ಹುಚ್ಚರಾಯ ಸ್ವಾಮಿಯೇ ದರ್ಶನ ಪಡೆದ ಬಿ.ವೈ.ರಾಘವೇಂದ್ರ

ಶಿಕಾರಿಪುರ: ಶ್ರಾವಣ ಮಾಸದ ಕಡೆಯ ಶನಿವಾರದ ನಿಮಿತ್ತ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಯ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಚ್ಚರಾಯಸ್ವಾಮಿಗೆ ನಾಡಿನಾದ್ಯಂತ ಭಕ್ತರಿದ್ದಾರೆ. ಶ್ರಾವಣ, ಕಾರ್ತಿಕ ಮಾಸ, ಹಬ್ಬ-ಹರಿದಿನ, ಜಾತ್ರೆ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನಮ್ಮ ಕುಟುಂಬದ ಕ್ಷೇಮ ಮತ್ತು ಯಶಸ್ಸಿಗೆ ಶ್ರೀ ಹುಚ್ಚರಾಯಸ್ವಾಮಿಯೇ ಕಾರಣ. ಇಂದು ದರ್ಶನದಿಂದ ಮನಸಿಗೆ ನೆಮ್ಮದಿಯಾಗಿದೆ. ಸ್ವಾಮಿಯ ಅಭಯಾನುಗ್ರಹದಿಂದ ತಾಲೂಕಿನಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿದೆ ಎಂದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುಸಿಂಗ್, ಸ್ಥಾಯಿ ಸಮಿತಿಯ ಅಧ್ಯಕ್ಷ ರೇಣುಕಸ್ವಾಮಿ, ಸದಸ್ಯೆ ರೂಪಕಲಾ ಹೆಗಡೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಗೊಬ್ಬರದ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಈಶ್ವರಪ್ಪ, ಉಪಾಧ್ಯಕ್ಷ ಸೋಮಶೇಖರ್, ಗೌರವ ಅಧ್ಯಕ್ಷ ಹುಚ್ಚಪ್ಪ, ಖಜಾಂಚಿ ತಮ್ಮಣ್ಣನವರ್, ನಟರಾಜ್, ಕಾರ್ಯದರ್ಶಿ ಚಂದ್ರಶೇಖರ್, ಉಪ ಕಾರ್ಯದರ್ಶಿ ಕುಮಾರಸ್ವಾಮಿ, ನಾಗರಾಜ್ ಇತರರಿದ್ದರು.