ಜಿಲ್ಲೆ

ಕಡೆಯ ಕಾರ್ತಿಕ ಸೋಮವಾರದ ವಿಶೇಷ ಪೂಜೆ

ನೂರಾರು ಭಕ್ತರು ಭಾಗಿ

ಮದ್ದೂರು : ಕಡೇಯ ಕಾರ್ತಿಕ ಸೋಮವಾರದ ಅಂಗವಾಗಿ ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿವಿಧ ಸನ್ನಿಧಿಗಳಲ್ಲಿ ಪೂಜಾ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿದವು. ಸಂಜೆ ಕಾರ್ತಿಕ ದೀಪೋತ್ಸವ ನಡೆಯಿತು.

ಪಟ್ಟಣ ವ್ಯಾಪ್ತಿಯ ಹಳೇ ಬಸ್ ನಿಲ್ದಾಣದ ಸಮೀಪದ ಪುರಾಣ ಪ್ರಸಿದ್ಧ ಶ್ರೀ ಕಾಶಿವಿಶ್ವೇಶ್ವರ- ವಿಶಾಲಾಕ್ಷಿ ದೇವಾಲಯ, ಬಸವೇಶ್ವರ ನಗರದ ಮಹದೇಶ್ವರ ಸನ್ನಿಧಿ ಹಾಗೂ ತಾಲೂಕಿನ ಸೋಮನಹಳ್ಳಿ ಗ್ರಾಮದ ಮಲೈ ಮಹದೇಶ್ವರ, ಚನ್ನೇಗೌಡನದೊಡ್ಡಿ ಮುತ್ತರಾಯ ಹಾಗೂ ಮಹದೇಶ್ವರ ದೇವಾಲಯಗಳಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ವಿಶೇಷ ಪೂಜಾ ವಿಧಿ ವಿಧಾನಗಳು ಸಂಪನ್ನಗೊಂಡವು.

ವೈದ್ಯನಾಥಪುರದಲ್ಲಿ ಪ್ರಸಾದ ವಿನಿಯೋಗ : ತಾಲೂಕಿನ ವೈದ್ಯನಾಥಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ, ಚಿಕ್ಕಂಕನಹಳ್ಳಿ ಶ್ರೀ ನಂದಿ ಬಸವೇಶ್ವರ ದೇವಾಲಯದಲ್ಲಿ ದೇವರ ವಿಗ್ರಹಗಳಿಗೆ ಅಭಿಷೇಕ, ಅಲಂಕಾರ, ಪೂಜೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿದವು.