ಕಡೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಆಂಬುಲೆಗೆ ಡಾ. ಉಮೇಶ್ ಪೂಜೆ ಸಲ್ಲಿಸಿದರು. ಡಾ. ರವಿಕುಮಾರ್, ಡಾ. ಗುರುಮೂರ್ತಿ, ಸುರೇಶ್ ಇತರರಿದ್ದರು.  
ಜಿಲ್ಲೆ

ಕಡೂರಿಗೆ 4ನೇ ಆಂಬುಲೆನ್ಸ್ ಸೇವೆ

ಕಡೂರು: ಮುಖ್ಯಮಂತ್ರಿ ನಿಧಿಯಿಂದ 30 ಲಕ್ಷ ರೂಪಾಯಿಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಆಂಬುಲೆನ್ಸ್‌ನ್ನು ಶಾಸಕ ಕೆ.ಎಸ್.ಆನಂದ್ ಕೊಡಿಸಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್ ತಿಳಿಸಿದರು.

ಆಸ್ಪತ್ರೆ ಆವರಣದಲ್ಲಿ ಸೋಮವಾರ ಆಂಬುಲೆನ್ಸ್‌ಗೆ ಪೂಜೆ ಸಲ್ಲಿಸಿ ಸೇವೆಗೆ ಚಾಲನೆ ನೀಡಿ ಮಾತನಾಡಿ, ಆಸ್ಪತ್ರೆಗೆ 4ನೇ ಆಂಬುಲೆನ್ಸ್ ಇದಾಗಿದ್ದು, ಅಪಘಾತದ ಗಾಯಾಳುಗಳ ಸೇವೆಗೆ ಇದನ್ನು ಹೆಚ್ಚು ಬಳಸಿಕೊಳ್ಳಲಾಗುವುದು. ಆಂಬುಲೆನ್ಸ್‌ನಲ್ಲಿ ಎಲ್ಲ ಮೂಲ ಸೌಲಭ್ಯಗಳಿವೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಡಿ.ರವಿಕುಮಾರ್, ಡಾ. ಗುರುಮೂರ್ತಿ, ಡಾ. ಸುನೀಲ್, ಡಾ. ಚಂದನ ದೀಪಕ್, ಲ್ಯಾಬ್ ಸುರೇಶ್ ಮತ್ತು ಸಿಬ್ಬಂದಿ ಇದ್ದರು.