ಗೋಣಿಕೊಪ್ಪ: ಕಡವೆ ಮಾಂಸ ಮಾರಾಟಕ್ಕೆ ಮುಂದಾಗಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹಾತೂರು ಗ್ರಾಮದ ಕೊಕ್ಕಂಡ ಸತ್ಯುಂಜಯ ಹಾಗೂ ಗೋಣಿಕೊಪ್ಪ ನಿವಾಸಿ ಶರಣು ಬಂಧಿತರು. ಸೋಮವಾರ ಹಾತೂರು ಗ್ರಾಮದಲ್ಲಿ ಕಡವೆ ಬೇಟೆಯಾಡಿ, ಮಾಂಸ ಮಾರಾಟ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ 60 ಕೆಜಿ ಮಾಂಸ ವಶಕ್ಕೆ ಪಡೆದರು. ಸ್ಥಳದಲ್ಲಿದ್ದ ಇತರರು ಪರಾರಿಯಾಗಿದ್ದಾರೆ.
ವಿರಾಜಪೇಟೆ ಡಿಸಿಎಫ್ ವೈ. ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ಕೊಚ್ಚೆರ ಎ.ನೆಹರು, ಆರ್‌ಎಫ್‌ಒ ಕಳ್ಳಿರ ದೇವಯ್ಯ, ಡಿಆರ್‌ಎಫ್‌ಒ ಶ್ರೀಶೈಲ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿ ಸಿ.ಅರುಣಾ, ಮಾಲತೇಶ್ ಬಡಿಗೇರ್, ಚಂದ್ರಶೇಖರ ಅಮರಗೋಳ, ಅಶೋಕ, ಆರ್‌ಆರ್‌ಟಿ ಸಿಬ್ಬಂದಿ ಅನಿಲ್, ವಿಕಾಸ್, ಸುರೇಶ, ಮಹೇಶ್, ನಾಚಪ್ಪ, ಮುರುಗನ್, ಮಂಜು, ಸಚಿನ್, ವಿನೋದ್, ವಿನು, ಅಚ್ಚಯ್ಯ ಕಾರ್ಯಾಚರಣೆ ನಡೆಸಿದರು. ಬಂಧಿತರನ್ನು ಹೆಚ್ಚಿನ ತನಿಖೆಗೆ ಪೊನ್ನಂಪೇಟೆ ಆರ್‌ಎಫ್‌ಒ ಶಂಕರ ಅವರಿಗೆ ಹಸ್ತಾಂತರಿಸಲಾಗಿದೆ.