ಚಿಕ್ಕಮಗಳೂರಿನ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಾಡುವ ಅಂಗಡಿ ಮಾಲೀಕರು, ಮಾರಾಟಗಾರರ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್, ಎಸ್‌ಪಿ ವಿಕ್ರಮ ಅಮಟೆ, ಎಎಸ್‌ಪಿ ಜಯಕುಮಾರ್ ಉಪಸ್ಥಿತರಿದ್ದರು. 
ಜಿಲ್ಲೆ

ಕಠಿಣ ಸುರಕ್ಷತಾ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ಪಟಾಕಿ ಮಾಡುವ ಅಂಗಡಿ ಮಾಲೀಕರು ಹಾಗೂ ಮಾರಾಟಗಾರರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಹಾಗೂ ಸಿಎಸ್‌ಐಆರ್ ಲೋಗೋ ಹೊಂದಿರುವ ಸ್ವದೇಶಿ, ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾಡಬೇಕು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದರು.

ನಗರದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಾಡುವ ಅಂಗಡಿ ಮಾಲೀಕರು, ಮಾರಾಟಗಾರರ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಮಾರಾಟ ಹಾಗೂ ಶೇಖರಣೆ ಮಾಡುವ ಸ್ಥಳಗಳಲ್ಲಿ ವಿದ್ಯುತ್ ಅವಘಡಗಳು ಸಂಭವಿಸದAತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪೊಲೀಸ್ ಹಾಗೂ ಜಿಲ್ಲಾಡಳಿತದಿಂದ ನೀಡಲಾಗಿರುವ ನೀತಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅನುಮತಿ ಮತ್ತು ಲೈಸೆನ್ಸ್ ರದ್ದುಗೊಳಿಸುತ್ತೇವೆ. ಅಲ್ಲದೇ ಜಿಲ್ಲೆಯ ಯಾವುದಾದರೂ ಪ್ರದೇಶಗಳಲ್ಲಿ ಸ್ಥಳೀಯವಾಗಿ ಕಾನೂನು ಬಾಹಿರವಾಗಿ ಸುರಳಿ ಆಕಾರದ ಹೆಚ್ಚು ಶಬ್ದ ಮಾಲಿನ್ಯ ಉಂಟು ಮಾಡುವ ಆರೋಗ್ಯಕ್ಕೆ ಹಾನಿಕರವಾದ ಪಟಾಕಿಗಳನ್ನು ತಯಾರಿಸಿ ಮಾರಾಟ ಮಾಡುವುದು ಕಂಡುಬAದಲ್ಲಿ ಅಂತಹಾ ವ್ಯಕ್ತಿಗಳ ವಿರುದ್ಧ ಹತ್ತು ವರ್ಷಗಳವರೆಗೆ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.

ಡಿಸಿ ಮೀನಾ ನಾಗರಾಜ್ ಮಾತನಾಡಿ, ಪಟಾಕಿ ಅಂಗಡಿ ಮಾಲೀಕರು ಮಾರಾಟಗಾರರು ಕಡ್ಡಾಯವಾಗಿ ಕ್ಯೂಆರ್ ಕೋಡ್ ಸಿಎಸ್‌ಐಆರ್ ಲೋಗೋ ಹೊಂದಿರುವ ಪರಿಸರ ಸ್ನೇಹಿ ಸ್ವದೇಶಿ ಹಸಿರು ಪಟಾಕಿಗಳನ್ನಷ್ಟೇ ಮಾರಾಟ ಮಾಡಬೇಕು. ಪಟಾಕಿ ಮಾರಾಟಗಾರರು ಕಾನೂನು ಬಾಹಿರವಾಗಿ ಲೈಸನ್ಸ್ ಪಡೆಯದೆ ಶೇಖರಣೆ ಮಾಡದಂತೆ, ಗೋದಾಮುಗಳಲ್ಲಿ ಶೇಖರಿಸಿಡುವ ಮಾರಾಟಗಾರರು ಕಡ್ಡಾಯವಾಗಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿ ಒಂದು ದಿನದ ಒಳಗಾಗಿ ಅನುಮತಿ ಪಡೆದುಕೊಳ್ಳಬೇಕು. ಪೊಲೀಸ್ ಹಾಗೂ ಜಿಲ್ಲಾಡಳಿತದಿಂದ ತಪಾಸಣೆಗೆ ಬರುವ ಅಧಿಕಾರಿಗಳ ತಂಡಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಎಎಸ್‌ಪಿ ಸಿ.ಟಿ.ಜಯಕುಮಾರ್, ವಾಣಿಜ್ಯ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿ ಲೋಕೇಶ್, ಆಹಾರ ನಿರೀಕ್ಷಕ ಈಶ್ವರ್, ನಗರಸಭೆ ಎಇಇ ವೆಂಕಟೇಶ್, ಮಾಲಿನ್ಯ ನಿಯಂತ್ರಣ ಮಂಡಳಿಯ ಎಇಇ ವಿನಯ್ ಮತ್ತಿತರರಿದ್ದರು.