ಕಟ್ಟೆ ಮಾರಿಯಮ್ಮ ದೇವಿ ಕರಗ ಮಹೋತ್ಸವದ ಮೆರವಣಿಗೆ 
ಜಿಲ್ಲೆ

ಕಟ್ಟೆ ಮಾರಿಯಮ್ಮದೇವಿ ಅದ್ದೂರಿ ಕರಗ ಮಹೋತ್ಸವ

ರವಿಕುಮಾರ್ ಪಿ. ಕೆ

ಅರಸೀಕೆರೆ: ನಗರದ ಹಾಸನ ರಸ್ತೆಯ ಬಡಾವಣೆಯ ಬಲಭಾಗಕ್ಕೆ ಹೊಂದಿಕೊಂಡಂತಿರುವ ಕಟ್ಟೆ ಮಾರಿಯಮ್ಮದೇವಿ ಕರಗ ಮಹೋತ್ಸವ ಮಂಗಳವಾರ ವೈಭವದಿಂದ ನೆರವೇರಿತು.

ಕಂತೇನಹಳ್ಳಿ ಕೆರೆ ಅಂಗಳದಲ್ಲಿರುವ ಶನೈಶ್ಚರ ದೇಗುಲದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಭಕ್ತರು ಕರಗವನ್ನು ಹೊತ್ತು ದೇಗುಲದ ವರೆಗೆ ಮೆರವಣಿಗೆ ಮೂಲಕ ಕರೆತಂದರು. ಹರಕೆ ಹೊತ್ತಿದ್ದ ಭಕ್ತರು ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಆಟೋ, ಟ್ರ್ಯಾಕ್ಟರ್ ಎಳೆಯುತ್ತಿದ್ದ ದೃಶ್ಯ ನೋಡುಗರನ್ನು ನಿಬ್ಬೆರಾಗಿಸುವಂತಿತ್ತು.

ತಾಲೂಕು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಜಗದೀಶ್, ಮುಖಂಡರಾದ ಬಾಲು, ರವಿ, ಬಾಲು ಸೇರಿ ಹಲವರು ನೇತೃತ್ವ ವಹಿಸಿದ್ದರು. ದೇವಾಲಯ ಸಮಿತಿ ವತಿಯಿಂದ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಗಿತ್ತು.