ಹುಕ್ಕೇರಿ: ತಾಲೂಕಿನ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಬೆಳ್ಳಿ ಹಬ್ಬ ಸಮಾರಂಭ ಮತ್ತು ಮೇಲಂತಸ್ತಿನ ಕಟ್ಟಡ, ವಾಣಿಜ್ಯ ಮಳಿಗೆಗಳ ಉದ್ಘಾಟನೆ ಮೇ ೧೧ರಂದು ಬೆಳಗ್ಗೆ ೧೦.೩೦ಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಲಿದ್ದಾರೆಂದು ಸಂಘದ ಸಂಸ್ಥಾಪಕ ಎಸ್.ಐ.ಸಂಬಾಳ ತಿಳಿಸಿದರು.
ಪಟ್ಟಣದ ಸಹಕಾರಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೫ ವರ್ಷಗಳ ಅವಧಿಯಲ್ಲಿ ಸಂಘವು ೫೦ ಲಕ್ಷ ರೂ. ವೆಚ್ಚದ ಸ್ವಂತ ಕಟ್ಟಡ ನಿರ್ಮಿಸಿದ್ದು, ೨೭.೧೫ ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಸಹಕಾರಿ ಅಧ್ಯಕ್ಷ ಸಿ.ಎಂ.ದರಬಾರೆ ಮಾತನಾಡಿ, ೨.೫೦ ಕೋಟಿ ರೂ. ಷೇರು ಬಂಡವಾಳ, ೪.೨೫ ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ ೬.೨ ಕೋಟಿ ರೂ. ವಾರ್ಷಿಕ ಆರ್ಥಿಕ ವ್ಯವಹಾರ ನಡೆಸಿ, ೨೭.೧೫ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಉಪಾಧ್ಯಕ್ಷ ಗೋವಿಂದ ಮುತಾಲಿಕ ಮಾತನಾಡಿ, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ನಿಖಿಲ ಕತ್ತಿ ವಹಿಸಲಿದ್ದಾರೆ. ಜತೆಗೆ ವಿವಿಧ ಮಠಾಧೀಶರು, ಸಚಿವರು, ಶಾಸಕರು ಸೇರಿ ಹಲವಾರು ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕರಾದ ಎಸ್.ಸಿ.ಮಾನಗಾಂವಿ, ಬಿ.ಕೆ.ಯರಗಟ್ಟಿ ಇತರರಿದ್ದರು. ಆರ್.ಎ.ಬಡಿಗೇರ ಸ್ವಾಗತಿಸಿದರು.