ಕಾರವಾರ: ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವನ್ನು ಸಾಯಿಸಿ ಕಿಸೆಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾದ ಅಂಬಾರಕೊಡ್ಲಿನ ಬಲೀಂದ್ರ ಗೌಡ ಅವರು ಮಂಗಳವಾರ ಸೊಪ್ಪು ತರಲು ಕಾಡಿಗೆ ತೆರಳಿದ್ದ ವೇಳೆ ನಂಜಿನ ಹಾವಿನ ಮರಿಯೊಂದು ಕಚ್ಚಿತ್ತು. ಒಮ್ಮೆ ಹೆದರಿದ ಅವರು ನಂತರ ಹಾವಿನ ಮರಿಯನ್ನು ಸಾಯಿಸಿದ್ದಾರೆ. ಚಿಕಿತ್ಸೆ ಕೊಡಲು ವೈದ್ಯರಿಗೆ ತಿಳಿಯಬೇಕು ಎಂಬ ಕಾರಣಕ್ಕೆ ಅವರು ಹಾವನ್ನು ಕವರ್ ಒಂದರಲ್ಲಿ ತುಂಬಿ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಕಾರವಾರ ಕ್ರಿಮ್್ಸ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಯಿತು. ಅವರು ಇಲ್ಲಿ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.