ಮೈಸೂರು: ಜೆಕೆ ಟಯರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ತನ್ನ ಚೆನ್ನೈ ಟಯರ್ ಪ್ಲಾಂಟ್‌ನಲ್ಲಿ ಐಎಸ್‌ಸಿಸಿ ಪ್ಲಸ್ ಪ್ರಮಾಣಿತ ಸುಸ್ಥಿರ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಯುಎಕ್ಸ್ ರಾಯಲ್ ಗ್ರೀನ್ ಪ್ಯಾಸೆಂಜರ್ ಕಾರ್ ಟಯರ್‌ಗಳ ಉತ್ಪಾದನೆಯನ್ನು ಆರಂಭಿಸಿದೆ.
ಭಾರತದ ಟೈರ್ ಉದ್ಯಮದಲ್ಲಿ ಇದು ಮತ್ತೊಂದು ಹೊಸ ಮತ್ತು ಮೊದಲ ಪ್ರಯತ್ನವಾಗಿದೆ. ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಡಿ) ಪ್ರಯತ್ನಗಳ ಮೂಲಕ ಹಸಿರು ತಂತ್ರಜ್ಞಾನಕ್ಕೆ ಕೊಡುಗೆ ನೀಡುವ ಮತ್ತು ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆ ಮಾಡುವ ಜೆಕೆ ಟಯರ್ ಅಚಲ ಬದ್ಧತೆಗೆ ಇದೊಂದು ಉತ್ತಮ ಪುರಾವೆಯಾಗಿದೆ.
ಜಾಗತಿಕವಾಗಿ ಗುರುತಿಸಲ್ಪಟ್ಟ ಇಂಟರ್‌ನ್ಯಾಷನಲ್ ಸಸ್ಟೇನೇಬಿಲಿಟಿ ಆ್ಯಂಡ್ ಕಾರ್ಬನ್ ಸರ್ಟಿಫಿಕೇಷನ್ (ಐಎಸ್‌ಸಿಸಿ ಪ್ಲಸ್) ಚೌಕಟ್ಟಿನಡಿಯಲ್ಲಿ ನೀಡಲಾದ ಈ ಪ್ರಮಾಣೀಕರಣವು, ಜವಾಬ್ದಾರಿಯುತವಾಗಿ ಸಂಗ್ರಹಿಸಿದ ಮರುಬಳಕೆ ಮಾಡಬಹುದಾದ ಮತ್ತು ನವೀಕರಿಸಬಹುದಾದ ಕಚ್ಚಾ ವಸ್ತುಗಳ ಬಳಕೆಯನ್ನು ದೃಢೀಕರಿಸುತ್ತದೆ.
ಜತೆಗೆ ಇದು ಕಂಪನಿಯ ಪರಿಸರ ಜವಾಬ್ದಾರಿ ಮತ್ತು ಅತ್ಯುತ್ತಮ ಉತ್ಪಾದನಾ ಪದ್ಧತಿಗಳೆಡೆಗಿನ ಕಂಪನಿಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಶೇ.80ರಷ್ಟು ಸುಸ್ಥಿರ, ಮರುಬಳಕೆ ಮಾಡಬಹುದಾದ ಮತ್ತು ನವೀಕರಿಸಬಹುದಾದ ವಸ್ತುಗಳಿಂದ ತಯಾರಾದ ಭಾರತದ ಮೊದಲ ಪ್ಯಾಸೆಂಜರ್ ಕಾರ್ ರೇಡಿಯಲ್ ಟಯರನ್ನು 2023ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಈ ಟಯರ್ ಅನ್ನು ಕಠಿಣ ಮೌಲ್ಯಮಾಪನ ಮತ್ತು ಪರೀಕ್ಷೆಗೆ ಒಳಪಡಿಸಲಾಯಿತು.
ಈ ಯುಎಕ್ಸ್ ರಾಯಲ್ ಗ್ರೀನ್ ಟಯರ್ ಎಂಬುದು ಜೆಕೆ ಟಯರ್‌ನ ಗ್ಲೋಬಲ್ ಟೆಕ್ ಸೆಂಟರ್‌ನ ಒಂದು ದಶಕಕ್ಕೂ ಹೆಚ್ಚು ಕಾಲದ ಸಂಶೋಧನೆಗೆ ದೊರೆತ ಫಲವಾಗಿದೆ. ಕಂಪನಿಯ ಆರ್‌ಡಿ ತಂಡವು ಸಾಂಪ್ರದಾಯಿಕ ಪೆಟ್ರೋಲಿಯಂ ಆಧಾರಿತ ವಸ್ತುಗಳನ್ನು ಸುಸ್ಥಿರ ಆಯ್ಕೆಗಳೊಂದಿಗೆ ಬದಲಿಸಲು ಪರ್ಯಾಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೆಕೆ ಟಯರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ರಘುಪತಿ ಸಿಂಘಾನಿಯಾ ಅವರು, ಸುಸ್ಥಿರ ಟಯರ್ ಉತ್ಪಾದನೆಯನ್ನು ಆರಂಭಿಸಿದ್ದು, ಇದು ಜೆಕೆ ಟಯರ್‌ನ ಪರಿಸರ ಜವಾಬ್ದಾರಿಯ ಉತ್ಪನ್ನ ಆವಿಷ್ಕಾರದ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಸಾಧನೆಯು ಹಸಿರು ತಂತ್ರಜ್ಞಾನ, ಅತ್ಯುತ್ತಮ ಆರ್ಥಿಕತೆ ತತ್ವಗಳು ಮತ್ತು ವಿಶ್ವದರ್ಜೆಯ, ಪರಿಸರಕ್ಕೆ ಕಡಿಮೆ ಪರಿಣಾಮ ಬೀರುವ ಉತ್ಪನ್ನಗಳ ತಯಾರಿಕೆಯಲ್ಲಿನ ನಮ್ಮ ಬದ್ಧತೆ ಪ್ರತಿಬಿಂಬಿಸುತ್ತದೆ. ಜತೆಗೆ ಆವಿಷ್ಕಾರ, ಗುಣಮಟ್ಟ ಮತ್ತು ಸುರಕ್ಷತೆಯು ನಮ್ಮ ಕಾರ್ಯಾಚರಣೆಗಳ ಮೂಲ ಸ್ಥಾನದಲ್ಲಿರುತ್ತವೆ ಎಂಬುದನ್ನು ಈ ಮೂಲಕ ಸಾರಲಾಗಿದೆ ಎಂದರು.