ಕಕ್ಕೇರಿ: ಗ್ರಾಮದ ಬಿಷ್ಠಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಜಾತ್ರೆಗೆ ಶನಿವಾರ ಭೇಟಿ ನೀಡಿದ ಶಾಸಕ ವಿಠ್ಠಲ ಹಲಗೇಕರ ದೇವಸ್ಥಾನ ಸಮಿತಿಯಿಂದ ಸನ್ಮಾನ ಸ್ವೀಕರಿಸಿದರು. ನಂತರ ಮಾತನಾಡಿ, ಜಾತ್ರೆ ಪುರಾತನ ಕಾಲದಿಂದಲೂ ವೈಭವದಿಂದ ನಡೆಯುತ್ತ ಬಂದಿದೆ.
ಶಾಸಕರು ಹಾಗೂ ಸಂಸದರ ಅನುದಾನದಲ್ಲಿ ಕಕ್ಕೇರಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗುವುದು. ಉಪ ಪೊಲೀಸ್ ಠಾಣೆ ಸೌಕರ್ಯವೂ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಡಾ.ಪ್ರಸನ್ನ ದೊಡೆಬೈಲಕರ, ಚಂಗಪ್ಪ ನಿಲಜಕರ, ಸಿದ್ದು ಪಾಟೀಲ, ವಕೀಲ ಸುರೇಶ ಬೋಸ್ಲೆ, ಶಿವರಾಜ ಲೋಕಲಕರ, ನಾಗರಾಜ ಗೌಡಪ್ಪಗೋಳ, ಮಂಜುನಾಥ ಗುಪಿತ, ಭೀಮರಾವ ಗುಪಿತ, ಬಿಷ್ಠಪ್ಪ ಬಡಿಗೇರ ಇತರರಿದ್ದರು.