ಯಾದಗಿರಿ: ಜಿಲ್ಲಾಡಳಿತದಿಂದ ಈ ಬಾರಿ ಅಮೃತ ಕಲ್ಯಾಣ ಕನರ್ಾಟಕ (ಹೈದರಾಬಾದ್ ಕನರ್ಾಟಕ) ಉತ್ಸವ ದಿನವನ್ನು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದರು.
ನಗರದ ಜಿಲ್ಲಾಕಾರಿ ಕಚೇರಿ ಸಭಾಗಂಣದಲ್ಲಿ ಉತ್ಸವದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆ.17ರಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಲಿದ್ದಾರೆ. ಮೈದಾನದ ಸ್ವಚ್ಛತೆ, ಕುಡಿಯುವ ನೀರು, ಅಲ್ಪೋಪಹಾರ, ವೇದಿಕೆ ಸಿದ್ದತೆಗಳನ್ನು ಸಂಬಂಸಿದ ಅಕಾರಿಗಳು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾಡಳಿತದಿಂದ ಜರುಗುವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಕಾರಿಗಳು, ಸಿಬ್ಬಂದಿ ತಪ್ಪದೆ ಭಾಗವಹಿಸಬೇಕು. ಪೋಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿ ಶಾಮಕದಳ ಸೇರಿದಂತೆ ಕವಾಯತು ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಶಿಷ್ಠಾಚಾರದಂತೆ ಅತಿಥಿ,ಗಣ್ಯರನ್ನು ಆಹ್ವಾನಿಸಬೇಕು. ಧ್ವಜಾರೋಹಣ ನಡೆಯುವ ಮೈದಾನದ ಸುತ್ತಲೂ ಅವಶ್ಯಕತೆ ಇದ್ದಲ್ಲಿ ಬ್ಯಾರಿಕೇಡ್ ನಿಮರ್ಾಣ, ಪೊಲೀಸ್ ಬಂದೊಬಸ್ತ್, ಅಗ್ನಿಶಾಮಕ ವಾಹನ, ಆರೋಗ್ಯ ಇಲಾಖೆಯಿಂದ ನುರಿತ ವೈದ್ಯರೊಂದಿಗೆ ಚಿಕಿತ್ಸಾ ವಾಹನ ಇರುವಂತೆ ನೋಡಿಕೊಳ್ಳಿ ಎಂದು ನಿದರ್ೇಶನ ಮಾಡಿದರು.