ಜಿಲ್ಲೆ

ಕಂಬಿ ಐದೇಶಿ ಉತ್ಸವ ಅದ್ದೂರಿ

ಕಾಗವಾಡ: ತಾಲೂಕಿನ ಮೋಳೆ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳಿಂದ ಜರುಗುತ್ತಿರುವ ಕಂಬಿ ಐದೇಶಿ ಉತ್ಸವ ಮಂಗಳವಾರ ಮಲ್ಲಯ್ಯನ ಇಷ್ಟದ ನೈವೇದ್ಯ ಬೆಲ್ಲ ಹಂಚುವುದರೊಂದಿಗೆ ಸಂಪನ್ನಗೊಂಡಿತು

ಗ್ರಾಮದ ಭಕ್ತರು ಬೆಲ್ಲ ಹಂಚಿದರು. ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಮುಗಿಸಿ ಬರುವ ಭಕ್ತರು ಗ್ರಾಮದಲ್ಲಿ ಮೊದಲ ದಿನ ಕಂಬಿ ಹಾಗೂ ನಂದಿಕೋಲನ್ನು ಆರತಿ ಮೂಲಕ ಸ್ವಾಗತಿಸಿ, ಬಳಿಕ ಐದು ದಿನಗಳ ವಿಶಿಷ್ಟ ಉತ್ಸವ ಆಚರಣೆ ಮಾಡಲಾಗುತ್ತದೆ. ಪ್ರತಿದಿನ ವಿಶೇಷ ಪೂಜೆ, ನೈವೇದ್ಯ ಮಾಡಿ, ಹರಕೆ ತೀರಿಸುತ್ತಾರೆ. ಕೊನೆ ದಿನ ಬೆಲ್ಲ ಹಂಚಿದ ಬಳಿಕ ಉತ್ಸವ ಸಂಪನ್ನಗೊಂಡಿತು.