ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ಸಾರ್ಯ ಗ್ರಾಮದ ಕೂಸ್ಗಲ್ ರಂಗನಾಥಸ್ವಾಮಿ ಮತ್ತು ಚನ್ನಮ್ಮ ದೇವಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ದೀಪಾವಳಿ ಹಬ್ಬದ ಮರು ದಿನ ಸಂಪ್ರದಾಯದಂತೆ ಗ್ರಾಮದ ಬೆಟ್ಟದ ಮೇಲಿನ ಗಿರಿ ಸಿದ್ದೇಶ್ವರಸ್ವಾಮಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಗುರುವಾರ ಸಂಜೆ ಕೂಸ್ಗಲ್ ರಂಗನಾಥಸ್ವಾಮಿ ಮತ್ತು ಚನ್ನಮ್ಮ ದೇವಿ ದೇವಸ್ಥಾನದಲ್ಲಿ ಅರ್ಚಕ ಚಂದ್ರಶೇಖರ್ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಎಲ್ಲರೂ ಒಟ್ಟಾಗಿ ಬೆಟ್ಟ ಹತ್ತಿದರು. ಬೆಟ್ಟದ ಮೇಲಿನ ಗಿರಿ ಸಿದ್ದೇಶ್ವರಸ್ವಾಮಿಗೆ, ಹುಲಿ ಗುಹೆಗೆ ಪೂಜೆ ಸಲ್ಲಿಸಲಾಯಿತು. ನಂತರ 20 ಅಡಿ ಎತ್ತರ ಇರುವ ಕಲ್ಲಿನ ಕಂಬಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಲ್ಲಿನ ಮೇಲೆ ಏಣಿಯ ಸಹಾಯದಿಂದ ಹತ್ತಿ ದೀಪ ಹಚ್ಚಲಾಯಿತು. ನಾಡಿಗೆ ದೇವರು ಒಳ್ಳೆಯದು ಮಾಡಲಿ ಎಂದು ದೇವಸ್ಥಾನ ಸಮಿತಿಯಿಂದ ಪ್ರಾರ್ಥಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ದಯಾಳ್, ಕಾರ್ಯದರ್ಶಿ ನಾಗರಾಜ್, ಸದಸ್ಯರು ಇದ್ದರು.