ಜಿಲ್ಲೆ

ಕಂಪ್ಲಿ ತಾಲೂಕಿನ ಆರು ಕೇಂದ್ರಗಳಲ್ಲಿ ಎಕ್ಸಾಂ

ಕಂಪ್ಲಿ: ಪಟ್ಟಣದ ನಾಲ್ಕು, ಎಮ್ಮಿಗನೂರು ಮತ್ತು ಸುಗ್ಗೇನಹಳ್ಳಿಗಳಲ್ಲಿ ತಲಾ ಒಂದು ಸೇರಿದಂತೆ ತಾಲೂಕಿನ ಆರು ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.

2179ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಸಂಯುಕ್ತ ಪಿಯು ಜೂನಿಯರ್ ಕಾಲೇಜು ಕೇಂದ್ರದಲ್ಲಿ 300, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಕೇಂದ್ರದಲ್ಲಿ 289, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೇಂದ್ರದಲ್ಲಿ 450, ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆ ಕೇಂದ್ರದಲ್ಲಿ 380 ಪರೀಕ್ಷಾರ್ಥಿಗಳಿದ್ದಾರೆ. ಸುಗ್ಗೇನಹಳ್ಳಿಯ ವಿದ್ಯಾಭಾರತಿ ಶಾಲೆ ಕೇಂದ್ರದಲ್ಲಿ 410, ಎಮ್ಮಿಗನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಕೇಂದ್ರದಲ್ಲಿ 350 ಪರೀಕ್ಷಾರ್ಥಿಗಳಿದ್ದಾರೆ.