ಕಂಪಲಾಪುರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ನಾಗೇಗೌಡ, ಉಪಾಧ್ಯಕ್ಷರಾಗಿ ಬಿ.ಕೆ.ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನಾಗೇಗೌಡ ಹಾಗೂ ತಮ್ಮಯ್ಯ ಇಬ್ಬರನ್ನು ಹೊರತು ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಬಿ.ಅಶ್ವಿನ್ ಕುಮಾರ್ ಘೋಷಿಸಿದರು.
ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 11 ಜೆಡಿಎಸ್ ಬೆಂಬಲಿತರು, ಒಬ್ಬ ಕಾಂಗ್ರೆಸ್ ಬೆಂಬಲಿತ ಜಯಗಳಿಸಿದ್ದರು.
ನೂತನ ಅಧ್ಯಕ್ಷ ನಾಗೇಗೌಡ, ಉಪಾಧ್ಯಕ್ಷ ತಮ್ಮಯ್ಯ ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಕೆ.ಕುಮಾರ್, ಮಹದೇವ್, ಕೆ.ಎಂ.ಲಕ್ಷ್ಮಣ್, ಕೆ.ಆರ್.ಸಂತೋಷ್, ರವಿ, ಎಂ.ಮಹದೇವ್, ಗಿರೀಶ್, ಮಣಿ ಮಹೇಶ್, ಭಾಗ್ಯಾ ರಾಜೇಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಹರ್ಷ, ಮುಖಂಡರಾದ ಕೆ.ಎಸ್.ರಮೇಶ್, ವೆಂಕಟೇಶ್, ಬೀರೇಶ್, ವಿಜಿ, ರಾಮು, ಸೂರಿ, ನಾಗರಾಜ್, ಪುಟ್ಟೇಗೌಡ, ಮಂಜು ಇತರರು ಇದ್ದರು.