ಜಿಲ್ಲೆ

ಕಂದಾಯ ಭೂಮಿ ಅತಿಕ್ರಮಿಸಿ ಶುಂಠಿ ಬೆಳೆ

Chikkamagaluru

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮದ ಸರ್ವೆ ನಂ.137ರಲ್ಲಿ ವ್ಯಕ್ತಿಯೊಬ್ಬರು ಕಂದಾಯ ಭೂಮಿ ಅತಿಕ್ರಮಿಸಿಕೊಂಡು ಶುಂಠಿ ಬೆಳೆಯುತ್ತಿದ್ದು, ಇದನ್ನು ತೆರವುಗೊಳಿಸಿ ನಿವೇಶನರಹಿತರಿಗೆ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಎನ್.ಆರ್.ಪುರ ತಹಸೀಲ್ದಾರ್​ಗೆ ದೂರು ನೀಡಲಾಗಿದೆ ಎಂದು ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಜಾನ್​ವಿಲ್​ಫ್ರೆಡ್ ಸುನೀಲ್ ಡಿಸೋಜ ತಿಳಿಸಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಕೂಲಿ ಕಾರ್ವಿುಕರು ನಿವೇಶನ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಸಮಸ್ಯೆ ಪರಿಹರಿಸಬೇಕು. ಕಂದಾಯ ಭೂಮಿ ಒತ್ತುವರಿ ಮಾಡಿ ಶುಂಠಿ ಬೆಳೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭದ್ರಾ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವುದಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಮುದುಗುಣಿ ಗ್ರಾಮದ ಸರ್ವೆ ನಂ.68ರಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಒತ್ತುವರಿ ತೆರವುಗೊಳಿಸುವಂತೆ ಕೊಪ್ಪ ಡಿಎಫ್​ಒಗೆ ದೂರು ನೀಡಲಾಗಿದೆ. ಆದರೆ ಅರಣ್ಯ ಇಲಾಖೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

-