ಅಥಣಿ ಗ್ರಾಮೀಣ: ಬಸವಣ್ಣನ ಅನುಯಾಯಿಯಾಗಿ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಶರಣ ಎಂದು ಕೊಕಟನೂರ ಹಡಪದ ಅಪ್ಪಣ್ಣ ಸೇವಾ ಸಮಾಜದ ಅಧ್ಯಕ್ಷ ಶ್ರೀಕಾಂತ ನಾವಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಪಂ ಕಾರ್ಯಾಲಯದಲ್ಲಿ ಹಡಪದ ಅಪ್ಪಣ್ಣ ಸೇವಾ ಸಮಾಜ ಹಾಗೂ ಗ್ರಾಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಪ್ಪಣ್ಣ ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ವಚನಗಳ ಮೂಲಕ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಸದಾಶಿವ ಕಟ್ಟಿಮನಿ ಮಾತನಾಡಿ, ಅನುಭವ ಮಂಟಪದ ಪ್ರಮುಖ ರೂವಾರಿಯಾಗಿದ್ದ ಅಪ್ಪಣ್ಣ ಬಸವಣ್ಣ ಅವರಿಗೆ ಬೆನ್ನೆಲುಬಾಗಿ ನಿಂತು ವಚನ ರಚನೆ ಹಾಗೂ ಸಮಾಜ ಸೇವೆಯ ಪ್ರವೃತ್ತಿ ಸಮರ್ಥವಾಗಿ ನಿರ್ವಹಿಸಿದರು ಎಂದರು.
ಅಪ್ಪಣ್ಣನ ಭಾವಚಿತ್ರಕ್ಕೆ ವಿರೂಪಾಕ್ಷ ಕಾಡದೇವರಮಠ ಪೂಜೆ ಸಲ್ಲಿಸಿದರು.
ಶ್ರೀಶೈಲ ನಾವಿ, ಬಸವರಾಜ ಉಮರಾಣಿ, ಭರತೇಶ ರೊಡ್ಡ, ಕಲ್ಲಪ್ಪ ನಾವಿ, ಕವಿತಾ ತಳಕೇರಿ, ರುದ್ರಪ್ಪ ನಾವಿ, ರೇಣುಕಾ ಕಾಂಬಳೆ, ಸಂತೋಷ ನಾವಿ, ಪ್ರಶಾಂತ ತಳಕೇರಿ, ಸುರೇಶ ನಾವಿ, ಯಲ್ಲವ್ವ ಗೊಲ್ಲರ, ಮುಬಾರಕ ಮೊಮಿನ್, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ಹನುಮಂತ ಮಾದರ, ಶಿವರಾಮ ಹೊನಕಾಂಬಳೆ ಇತರರಿದ್ದರು.