ಯಳಂದೂರು: ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ತಾಲೂಕಿನ ಕಂದಹಳ್ಳಿ ದೇಗುಲಕ್ಕೆ ಭಾನುವಾರ ಭಕ್ತರ ದಂಡೆ ಆಗಮಿಸಿತ್ತು.
ಅಮವಾಸ್ಯೆ ನಿಮಿತ್ತ ದೇಗುಲದಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಇಲ್ಲಿರುವ ಲಿಂಗ ಹಾಗೂ ದೇಗುಲವನ್ನು ತಳಿರು ತೋರಣ ಹಾಗೂ ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹರಕೆ ಹೊತ್ತ ಭಕ್ತರು ದೇಗುಲದ ಸುತ್ತ ರಥ ಎಳೆಸುವ ಮೂಲಕ ಭಕ್ತಿ ಮೆರೆದರು. ದೇವಸ್ಥಾನ ವತಿಯಿಂದ ಸಾವಿರಾರು ಭಕ್ತರಿಗೆ ದೊಡ್ಡ ಆಲದ ಮರದ ಕೆಳಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.