ಸತ್ತಿ ಗ್ರಾಮದ ಬಳಿ ಕಂದಕಕ್ಕೆ ಬಿದ್ದಿದ್ದ ಕಾರು ಹೊರ ತೆಗೆದ ಗ್ರಾಮಸ್ಥರು. 
ಜಿಲ್ಲೆ

ಕಂದಕಕ್ಕೆ ಉರುಳಿದ ಕಾರು

ನಂದೇಶ್ವರ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಬಿದ್ದ ಘಟನೆ ಸಮೀಪದ ಸತ್ತಿ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಭವಿಸಿದೆ. ಅಥಣಿಯಿಂದ ಜಮಖಂಡಿಗೆ ಕಾರು ಹೊರಟಿತ್ತು. ಚಾಲಕನ ಅಜಾಗರೂಕತೆಯಿಂದ ಕಾರು ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ. ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮಸ್ಥರು ಚಾಲಕನನ್ನು ರಕ್ಷಿಸಿದ್ದಾರೆ. ಟ್ರಾೃಕ್ಟರ್‌ಗೆ ಹಗ್ಗ ಕಟ್ಟಿ ಕಾರನ್ನು ಮೇಲೆತ್ತಲಾಗಿದೆ.