ಜಿಲ್ಲೆ

ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡೋದು ಬೇಡ : ಕಾಂಗ್ರೆಸ್, ಬಿಜೆಪಿ ಮುಖಂಡರಿಗೆ ಎಚ್‌ಡಿಕೆ ಎಚ್ಚರ

ಚನ್ನಪಟ್ಟಣ: ಹಿಜಾಬ್ ಹಾಗೂ ಕೇಸರಿ ಶಾಲಿನ ಗಲಾಟೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಯಕ ಮಕ್ಕಳನ್ನು ಮುಂದಿಟ್ಟುಕೊಂಡು, ಅವರನ್ನು ಬೀದಿಯಲ್ಲಿ ನಿಲ್ಲಿಸಿ ಚೆಲ್ಲಾಟವಾಡಲಾಗುತ್ತಿದೆ ಎಂದು ವಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಲವೆಡೆ ಹಿಜಾಬ್ ಮತ್ತು ಕೇಸರಿ ಸಂರ್ಷ ನಡೆಯುತ್ತಿರುವುದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಬಿಜೆಪಿ, ಕಾಂಗ್ರೆಸ್ ನಾಯಕರು ಹಾಗೂ ಕೆಲ ಸಂಟನೆಗಳ ಮುಖಂಡರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಿಲ್ಲ. ಅಮಾಯಕರ ಮಕ್ಕಳಷ್ಟೇ ಓದುತ್ತಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದು ಬೇಡ ಎಂದು ಮುಖಂಡರನ್ನು ಎಚ್ಚರಿಸಿದರು.

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕಿಸುವ ಬಿಜೆಪಿ ನಾಯಕರು ಹಾಗೂ ಹಿಂದುಪರ ಸಂಟನೆಗಳು ಮೊದಲು ತಮ್ಮ ಮಕ್ಕಳಿಗೆ ಶಾಲು ಹಾಕಿಸಲಿ ಎಂದರು.

ದೇಶ ವಿದೇಶಗಳಲ್ಲಿ ಚರ್ಚೆ: ಇಲ್ಲಿ ಆರಂಭವಾಗಿರುವ ವಿವಾದ ಈಗ ಹಲವು ದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆಯಲ್ಲಿ ತೊಡಗಿರುವ ಮಕ್ಕಳ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮುಂದೆ ಮಕ್ಕಳ ವಿಡಿಯೋ ಇಟ್ಟುಕೊಂಡು ಕೋರ್ಟ್ ಕಚೇರಿಗೆ ಹೋಗುವಂತೆ ಮಾಡುತ್ತಾರೆ. ಈಗಾಗಲೇ ಕೆಲ ಮಕ್ಕಳ ಮೇಲೆ ಎಫ್‌ಐಆರ್ ಆಗಿದೆ. ಇನ್ನೂ ಸಾವಿರಾರು ಮಕ್ಕಳ ಮೇಲೆ ಕೇಸ್ ಬೀಳಲಿದ್ದು, ಮೊದಲು ಇದನ್ನು ನಿಲ್ಲಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ನ್ಯಾಯಾಲಯ ಮಧ್ಯ ಪ್ರವೇಶಿಸಿ ಈ ಪ್ರಕರಣ ತಿಳಿಗೊಳಿಸಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ತಾಪಂ ಮಾಜಿ ಸದಸ್ಯ ಕೂಡ್ಲೂರು ವೆಂಕಟೇಶ್, ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಖಜಾಂಚಿ ನಾರಾಯಣಗೌಡ ಸೇರಿ ಹಲವರು ಉಪಸ್ಥಿತರಿದ್ದರು.

ಜನಪ್ರತಿನಿಧಿಯಾಗಿ ಮಾತಾಡಿದ್ದು ತಪ್ಪು: ಇನ್ನು ಪ್ರಿಯಾಂಕ ಗಾಂಧಿ ಟ್ವೀಟ್‌ಗೆ ರೇಣುಕಾಚಾರ್ಯ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಾನು ಇನ್‌ವಾಲ್ವ್ ಆಗುವುದಿಲ್ಲ. ಜನಪ್ರತಿನಿಧಿಯಾಗಿ ಆ ರೀತಿ ಮಾತಾಡಿದ್ದು ತಪ್ಪು ಎಂದು ಎಚ್‌ಡಿಕೆ ಅಭಿಪ್ರಾಯಪಟ್ಟರು.

ಸರ್ಕಾರದ ವೈಲ್ಯ ಎದ್ದುಕಾಣುತ್ತಿದೆ: ಮಂಡ್ಯದಲ್ಲಿ ಘೋಷಣೆ ಕೂಗಿದ ಯುವತಿಗೆ 5 ಲಕ್ಷ ರೂ. ಬಹುವಾನಘೋಷಣೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಇವರು ದೇಶವನ್ನು ಯಾವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ಪ್ರಕರಣವನ್ನು ನಿಭಾಯಿಸುವಲ್ಲಿ ಗೃಹ ಸಚಿವರು ಮತ್ತು ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವಾದ ಈ ನಾಡಿನಲ್ಲಿ ಯಾವುದೇ ಕಾರಣಕ್ಕೂ ಸಾಮರಸ್ಯ ಕೆದಕುವ ಟನೆಗಳಿಗೆ ಪಾಲಕರು ಮತ್ತು ವಿದ್ಯಾರ್ಥಿಗಳು ಬೆಂಬಲ ನೀಡಬಾರದು ಮನವಿ ಮಾಡಿದರು.

ಡಿಕೆಶಿಗೆ ಕುಟುಕಿದ ಎಚ್‌ಡಿಕೆ: ಇನ್ನು ಬಿಜೆಪಿ ಸಚಿವರ ಮಗನೊಬ್ಬ ಕೇಸರಿ ಶಾಲು ಹಂಚುತ್ತಿದ್ದಾನೆ ಎಂದು ಹೇಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಬಗ್ಗೆ ಮಾಹಿತಿ ಇದ್ದು ಹೇಳಿದ್ದಾರೋ, ಇಲ್ಲದೆ ಹೇಳಿದ್ದಾರೋ ಗೊತ್ತಿಲ್ಲ. ಮಾಹಿತಿ ಇದ್ದರೆ ಸಾಕ್ಷಿ ಸಮೇತ ಜನರ ಮುಂದೆ ಇಟ್ಟರೆ ಒಪ್ಪಬಹುದು. ಇಲ್ಲ ಎಂದರೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ಗೆ ಎಚ್‌ಡಿಕೆ ಕುಟುಕಿದರು.