ವಿಜಯಪುರ: ವಿಜಯಪುರ ಜಿಲ್ಲಾ ಅಪರಾಧ ವಿಭಾಗ(ಸಿಇಎನ್) ವಿಶೇಷ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡು, ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಜಯಪುರ ತಾಲೂಕಿನ ಖತಿಜಾಪುರ ನಿವಾಸಿ ಅಂಬರೀಶ ರಾಠೋಡ ಎಂಬ ಆರೋಪಿಯನ್ನು ಬಂದಿಸಿದ್ದಾರೆ. ಕಂಟ್ರಿ ಪಿಸ್ತೂಲ್ ಹೊಂದಿದ್ದಾನೆ ಎನ್ನುವ ಖಚಿತ ಮಾಹಿತಿ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಮೂಲತಃ ಕಲಬುರ್ಗಿ ನಗರದ ಬಿದ್ದಾಪುರ ಕಾಲೋನಿ ನಿವಾಸಿ ಅಂಬರೀಶನನ್ನು ಬಂಧಿಸಿದ್ದಾರೆ. ಅನಧಿಕೃತವಾಗಿ ಪಿಸ್ತೂಲ್ ಹೊಂದಿದ್ದ ಆಸಾಮಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.