ಜಿಲ್ಲೆ

ಕಂಟೈನರ್‌ಗೆ ಕಾರು ಡಿಕ್ಕಿ,ಮೂವರ ಸಾವು


ಚಿತ್ರದುರ್ಗ:ಚಿತ್ರದುರ್ಗ-ದಾವಣಗೆರೆ ರಾ.ಹೆ.ಚಿಕ್ಕಬೆನ್ನೂರು ಬಳಿ ಶನಿವಾರ ಬೆಳಗ್ಗೆ ನಡೆದಿರುವ ಭೀಕರ ಅಪಘಾತದಲ್ಲಿ ಮಗು ಸೇರಿ ಮೂವರು ಸ್ಥಳದಲ್ಲೇ ಅಸು ನೀಗಿದ್ದು,ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ದಾವಣಗೆರೆ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಫಾರ್ಚ್ಯೂನರ್ ಕಾರು ಮುಂದೆ ಸಾಗುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದ್ದು, ಕಂಟೈನರ್ ಟೈರ್ ಬಸ್ಟ್ ಆಗಿದ್ದು ಅಪಘಾತಕ್ಕೆ ಕಾರಣವಾಗಿದೆ.
ಮೃತರನ್ನು ಪ್ರಜ್ವಲ್‌ರೆಡ್ಡಿ(30) ಸಿ.ಹರ್ಷಿತಾ(28)ಸೋಹನ್(2)ಮೃತರೆಂದು ಹಾಗೂ ಗಾಯಾಳುಗಳನ್ನು ಶಿಲ್ಪಾ,ಸ್ವರ್ಣಾಜಾರ್ಜ್,ಮಧುಮಿತ, ವಿಜಯರೆಡ್ಡಿ,ಶಿಚಿಕೃಷ್ಣ ಗಾಯಾಳುಗಳೆಂದು ಗುರುತಿಸಲಾಗಿದೆ. ಸ್ಥಳ ಪರಿಶೀಲಿಸಿರುವ ಭರಮಸಾಗರ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.