ಜಿಲ್ಲೆ

ಕ.ರಾಮು.ವಿ.ವಿ ಪರೀಕ್ಷಾ ಶುಲ್ಕ ಪಾವತಿಸಲು ಪರಿಷ್ಕೃತ ಅಧಿಸೂಚನೆ

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19 ರಿಂದ (ಜುಲೈ, ಜನವರಿ ಆವೃತ್ತಿ) 2021-22ನೇ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆದು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ (ನಾನ್ ಸಿಬಿಎಸ್ಸಿ) ಹಾಗೂ 2023-24ನೇ ಶೈಕ್ಷಣಿಕ ಸಾಲಿನಲ್ಲಿ (ಜನವರಿ ಆವೃತ್ತಿ) ವಾರ್ಷಿಕ ವಿಷಯಗಳಿಗೆ ಪ್ರವೇಶಾತಿ ಪಡೆದಿರುವ ಸ್ನಾತಕ, ಸ್ನಾತಕೋತ್ತರ ವಿಷಯಗಳ (ನಾನ್ ಸಿಬಿಎಸ್‌ಸಿ) (ಯು.ಜಿ., ಪಿ.ಜಿ) ಹೊಸ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಪರಿಷ್ಕೃತ ಪರೀಕ್ಷಾ ಅಧಿಸೂಚನೆಯನ್ನು ಹೊರಡಿಸಲಾಗಿದೆ.

2021-22 ಶೈಕ್ಷಣಿಕ ಸಾಲಿನಿಂದ (ಜುಲೈ, ಜನವರಿ ಆವೃತ್ತಿ) 2023-24ನೇ ಸಾಲಿನ ಜುಲೈ ಅಥವಾ ಜನವರಿ ಆವೃತ್ತಿ ಪ್ರವೇಶಾತಿ ಪಡೆದು ಸ್ನಾತಕ ಸ್ನಾತಕೊತ್ತರ ಶೈಕ್ಷಣಿಕ ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ಅಥವಾ ಪರೀಕ್ಷೆ ತೆಗೆದುಕೊಂಡಿಲ್ಲದ ಹಾಗೂ 2022-23 ಸಾಲಿನಿಂದ (ಜುಲೈ, ಜನವರಿ ಆವೃತ್ತಿಯ) 2024-25ನೇ ಶೈಕ್ಷಣಿಕ ಸಾಲಿನವರೆಗೆ (ಜುಲೈ, ಜನವರಿ ಆವೃತ್ತಿಯ) ಹೊಸ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅರ್ಜಿ ಆಹ್ವಾನಿಸಿದ್ದು, ದಂಡ ಶುಲ್ಕವಿಲ್ಲದೆ ಪಾವತಿಗೆ ಫೆಬ್ರವರಿ 28 ಕಡೆ ದಿನವಾಗಿದೆ. 200 ರೂದಂಡ ಶುಲ್ಕದೊಂದಿಗೆ ಮಾರ್ಚ್ 10 ಕಡೆಯ ದಿನವಾಗಿದೆ.

ಸದರಿ ಪರೀಕ್ಷೆಗಳು 2025ರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ತಿತಿತಿ.ಞಥಿಡಿ.ಚಿಛಿ.ಟಿ ನಲ್ಲಿ ಪರೀಕ್ಷಾ ಅರ್ಜಿ ಹಾಗೂ ಪರೀಕ್ಷಾ ಶುಲ್ಕಗಳನ್ನು ಎಲ್ಲ ದಾಖಲೆಗಳೊಂದಿಗೆ ಅಂತರ್ಜಾಲದ ಮೂಲಕವೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.