ಜಿಲ್ಲೆ

ಔಷಧ ವಿಜ್ಞಾನಕ್ಕೆ ಅವಕಾಶಗಳ ಆಗರ

ಕಲಬುರಗಿ: ಔಷಧ ವಿಜ್ನಾನ ಓದಿದವರಿಗೆ ಆಸ್ಪತ್ರೆಯ ಔಷಧ ವಿಭಾಗ ಹಾಗೂ ಸರ್ಕಾರದ ಔಷಧ ನಿಯಂತ್ರಣ ಇಲಾಖೆಯ ಜತೆಗೆ ಔಷಧಿ ತಯಾರಿಕಾ ಕಂಪನಿಗಳಲ್ಲಿ ಸಂಶೋಧಕ, ವಿಶ್ಲೇಷಕ, ಔಷಧ ಗುಣಮಟ್ಟ ನಿಯಂತ್ರಕ ಸೇರಿ ಹಲವು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ದೆಹಲಿ ಸದಸ್ಯ ಮತ್ತು ತಮಿಳುನಾಡಿನ ಸೇಲಂನ ವಿನಾಯಕ ಮಿಷನ್ ರಿಸರ್ಚ್ ಫೌಂಡೇಷನ್ ಕುಲಪತಿ ಡಾ.ಬಿ.ಜೈಕಾರ ಹೇಳಿದರು.

ನಗರದ ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೈದರಾಬಾದ್ ಕರ್ನಾಟಕ ಶಿP್ಷÀಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪುರೆ ಔಷಧ ವಿe್ಞÁನ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆ ಗುರುತಿಸಿ ಅದಕ್ಕೆ ತಕ್ಕಂತೆ ಪದವೀಧರರು ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕು ಎಂದರು.

ಸAಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ವೈದ್ಯರಿಗೆ ಸಮನಾಗಿ ಫಾರ್ಮಸಿಸ್ಟ್ಗಳು ಕೆಲಸ ಮಾಡುತ್ತಿದ್ದಾರೆ. ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪ್ರಾಮಾಣಿಕ ಮತ್ತು ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

೭೩ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಫಾರ್ಮಸಿ ಬಿ.ಫಾರ್ಮಾ- ೪೩, ಎಂ.ಫಾರ್ಮಾ-೦೫ ಮತ್ತು ಡಿ.ಫಾರ್ಮಾ ೨೫ ಜನ ಸೇರಿ ಒಟ್ಟು ೭೩ ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಮಾಡಿದರು.

ಸಂಸ್ಥೆ ಉಪಾಧ್ಯP್ಷÀ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಸದಸ್ಯರಾದ ಅರುಣಕುಮಾರ ಎಂ.ಪಾಟೀಲ್, ಡಾ.ಮಹಾದೇವಪ್ಪ ರಾಂಪುರೆ, ಡಾ.ಸಾಯಿನಾಥ ಪಾಟೀಲ್, ಅನೀಲಕುಮಾರ ಮರಗೋಳ, ಡಾ.ಕಿರಣ ದೇಶಮುಖ, ಡಾ.ಶಿವಾನಂದ ಮೇಳಕುಂದಿ, ನಿರ್ದೇಶಕ ಅಶೋಕಕುರ್ಮಾ ದಸ್ತಾಪುರ, ಕಾಲೇಜಿನ ಪ್ರಾಚಾರ್ಯ ಡಾ.ಪ್ರಕಾಶ ಸರಸಂಬಿ, ಉಪ ಪ್ರಾಚಾರ್ಯ ಡಾ.ಲಿಂಗರಾಜ ದಂಕಿ ಇತರರಿದ್ದರು. ಪೂಜಾ ಸಾಲಿಮಠ ನಿರೂಪಣೆ ಮಾಡಿದರು.