ಜಿಲ್ಲೆ

ಔದುಂಬರಲಿಂಗ ಆಶ್ರಮ ಜಾತ್ರೆ

ಬೀದರ್: ಇಲ್ಲಿಯ ನೌಬಾದ್ ಸಮೀಪದ ಔದುಂಬರಲಿಂಗ ಆಶ್ರಮದಲ್ಲಿ ಗುರುವಾರ (ಫೆ.23) ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರೂ ಆದ ಆಶ್ರಮದ ಪೀಠಾಧಿಪತಿ ಹವಾ ಮಲ್ಲಿನಾಥ ಮಹಾರಾಜರ ಸಾನಿಧ್ಯದಲ್ಲಿ ಆಶ್ರಮದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ವಿಶೇಷ ಪೂಜೆ, ಅಭಿಷೇಕ, ಆರತಿ, ಭಜನೆ, ಕೀರ್ತನೆ, ಮಹಾ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಔದುಂಬರಲಿಂಗ ಆಶ್ರಮವು ಪುರಾತನ ಆಶ್ರಮಗಳಲ್ಲಿ ಒಂದಾಗಿದೆ. ಹವಾ ಮಲ್ಲಿನಾಥ ಮಹಾರಾಜರು ಜವಾಬ್ದಾರಿ ಹೊತ್ತುಕೊಂಡ ನಂತರ ಆಶ್ರಮ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ. ಸುಂದರ ಸ್ವರೂಪ ಪಡೆದುಕೊಂಡಿದೆ. ಆಧ್ಯಾತ್ಮಿಕ ವಾತಾವರಣ ನೆಲೆಗೊಂಡಿದೆ. ವಾರ್ಷಿಕ ಜಾತ್ರೆ ಭಕ್ತರ ಸಮಾಗಮಕ್ಕೆ ವೇದಿಕೆ ಒದಗಿಸಿಕೊಡುತ್ತಿದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಐತಿಹಾಸಿಕ ಔದುಂಬರಲಿಂಗ ಹಾಗೂ ಹವಾ ಮಲ್ಲಿನಾಥ ಮಹಾರಾಜರ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.