ಜಿಲ್ಲೆ

ಓವರ್ ಲೋಡಿಂಗ್ ವಿದ್ಯುತ್ ಕಡಿತದ ಅವಧಿ ಇಳಿಕೆ

ಚಿತ್ರದುರ್ಗ: ಗ್ರಾಮೀಣ ಉಪವಿಭಾಗದ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ವಿವಿಧ ವಿದ್ಯುತ್ ಮಾರ್ಗಗಳು ಓವರ್ ಲೋಡ್‌ನೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ವಿದ್ಯುತ್ ಕಡಿತದ ಅವಧಿಯನ್ನು 5ರಿಂದ 4 ಗಂಟೆಗೆ ಇಳಿಸಿ ಸರಬರಾಜು ಮಾಡಲಾಗುವುದು.

ವಿದ್ಯುತ್ ಸಂಪರ್ಕದ ಸಮಯವನ್ನು ಸಂಬಂಧಿಸಿದ ಫೀಡರ್‌ಗಳ ವಾಟ್ಸ್ ಆ್ಯಪ್ ಗ್ರೂಪ್‌ಗಳ ಮೂಲಕ ಗ್ರಾಹಕರಿಗೆ ಸಂದೇಶ ಕಳಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯಣ್ಣ ತಿಳಿಸಿದ್ದಾರೆ.