ಜಿಲ್ಲೆ

ಓಬವ್ವಳ ಸ್ಮರಣೆ ಎಲ್ಲೆಡೆ ಆಗಲಿ

ಚಿತ್ರದುರ್ಗ: ಕೋಟೆನಾಡಿನ ಪ್ರತಿ ಮನೆಯಲ್ಲೂ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸುವಂತೆ ಆಗಬೇಕೆಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ತೋತ್ಸವ ದ್ಘಾಟಿಸಿ ಮಾತನಾಡಿದರು.
ದುರ್ಗದ ಮನೆ ಮಗಳು ಓಬವ್ವ ನಾಡಿನ ಹೆಮ್ಮೆ. ಮನೆ, ಶಾಲಾ-ಕಾಲೇಜುಗಳಲ್ಲಿ ವೀರ ವನಿತೆಯ ಜಯಂತಿ ಆಚರಿಸ ಬೇಕಿದೆ. ಸಮಯೋಚಿತ ಚಿಂತನೆ, ಧೈರ್ಯದ ಕಾರಣಕ್ಕೆ ಓಬವ್ವಳಿಗೆ ಜಗತ್ತಿನ ಅಸಾಮಾನ್ಯ ಮಹಿಳೆ ಪಟ್ಟ ದೊರೆತಿದೆ. ಮಹಿಳೆ ಮನಸ್ಸು ಮಾಡಿದರೆ ನಾಡು ರಕ್ಷಣೆಗೂ ಮುಂದಾಗಬಹುದೆಂಬುದಕ್ಕೆ ಓಬವ್ವಳ ಏಕಾಂಗಿ ಹೋರಾಟವೇ ಸಾಕ್ಷಿಯಾಗಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಕೈಬಿಟ್ಟಿದ್ದ ಓಬವ್ವಳ ಸಾಹಸಗಾಥೆಯನ್ನು ಮತ್ತೆ ಪಠ್ಯದಲ್ಲಿ ಸೇರಿಸಲು ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು. ಕೋಟೆಯಲ್ಲಿ ಓಬವ್ವಳ ಸ್ಮಾರಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಬಿಎಸ್‌ಐ ಪ್ರಧಾನ ಕಾರ‌್ಯದರ್ಶಿಗಳಾದ ಬೆಸ್ಕಾಂ ತಿಪ್ಪೇಸ್ವಾಮಿ, ಭೀಮನಕೆರೆ ತಿಪ್ಪೇಸ್ವಾಮಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಂಕುತಲಮ್ಮ, ಮಾದಿಗ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ತಿಪ್ಪೇಸ್ವಾಮಿ, ಉಪನ್ಯಾಸಕ ಇ.ನಾಗೇಂದ್ರಪ್ಪ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ವೇದಾಂತ, ಫುಲೆ ಅಧ್ಯಯನ ಕೇಂದ್ರದ ಅಧ್ಯಕ್ಷ ಸಿದ್ದೇಶ್, ಜಂಬೂದ್ವೀಪ ಟ್ರಸ್ಟ್ ಅಧ್ಯಕ್ಷ ರಾಮಣ್ಣ, ಶಾಂತಮ್ಮ, ಉಷಾ, ತಿಪ್ಪಮ್ಮ ಇತರರಿದ್ದರು.