ಜಿಲ್ಲೆ

ಓದುವ ಹುಚ್ಚು, ಕಿಚ್ಚು ಬೆಳೆಸಿಕೊಂಡರೆ ಸಾಧನೆ ಸುಲಭ :: ಆರ್.ಕೆ.ಹುಡಗಿ ಅಭಿಮತ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೀವನದಲ್ಲಿ ಏನನ್ನಾದರು ಸಾಧಿಸುವ ಗುರಿ ಹೊಂದಿದವರು ಓದುವ ಹುಚ್ಚು ಮತ್ತು ಕಿಚ್ಚನ್ನು ಬೆಳೆಸಿಕೊಂಡರೆ ಸಾಧನೆ ಸುಲಭವಾಗಲು ಸಾಧ್ಯವಾಗುತ್ತದೆ ಎಂದು ಚಿಂತಕ ಆರ್.ಕೆ.ಹುಡಗಿ ಹೇಳಿದರು.
ಶಹಾಬಾದ ತಾಲೂಕಿನ ರಾವೂರ್‌ನ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ ಹಾಗೂ ಕನ್ನಡ ನಾಡು ಲೇಖಕ ಮತ್ತು ಓದುಗರ ಸಹಕಾರಿ ಸಂಘದಿAದ ಏರ್ಪಡಿಸಿದ್ದ  'ಓದೋಣ ಪುಸ್ತಕ ಬೆಳೆಸೋಣ ಮಸ್ತಕ' ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಸಂಸ್ಕೃತಿ ಪ್ರತಿಯೊಬ್ಬರೂ ರೂಡಿಸಿಕೊಳ್ಳವ ಅಗತ್ಯವ ಇದೆ. ಜ್ಞಾನಕ್ಕಿಂತ ಮಿಗಿಲಾದ ವಸ್ತು ಜಗತ್ತಿನಲ್ಲಿ ಯಾವುದು ಇಲ್ಲ ಎಂದರು.
ಮಕ್ಕಳು ಪಾಲಕರಲ್ಲಿ ಹಬ್ಬ ಹರಿದಿನದಂದು ಕಾಡಿ ಬೇಡಿ ಹೊಸ ಬಟ್ಟೆ  ಕೊಳ್ಳುವ ಬದಲು ಪುಸ್ತಕ ಕೊಡಿಸಲು ಪಾಲಕರಲ್ಲಿ ಬೇಡಲು ಸಲಹೆ ನೀಡಿದರು. ನಿಮ್ಮ ಖರ್ಚಿನಲ್ಲಿ ಒಂದಿಷ್ಟು ಹಣ ಪುಸ್ತಕ ಖರೀದಿಗೆ ಮೀಸಲಿಟ್ಟರೆ ಮಾತ್ರ ಸಾಧನೆಗೆ ಸಹಕಾರಿ. ಓದಿಗಿ ನಮ್ಮ ಹವ್ಯಾಸ ಮತ್ತು ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿಯಿದೆ. ಎಷ್ಟೇ ದೊಡ್ಡ ಮನೆ ಕಟ್ಟಿದರೂ ಒಂದೂ ಪುಸ್ತಕವಿಲ್ಲದಿದ್ದರೆ ವ್ಯರ್ಥ, ಮನೆಯಲ್ಲಿ ಪುಸ್ತಕಗಳ ಭಂಡಾರದ ಮೂಲಕ ಮಸ್ತಕದ ಭಂಡಾರವು ತುಂಬಬೇಕು ಎಂದು ಹೇಳಿದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ, ಪ್ರಾಸ್ತಾವಿಕ  ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿದರು.
 ಬಹುಮಾನ ವಿಜೇತ ಮಕ್ಕಳಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಚೆನ್ನಣ್ಣ ಬಾಳಿ, ಡಾ.ಗುಂಡಣ್ಣ ಬಾಳಿ ಇದ್ದರು. ಶಿಕ್ಷಕಿ ಭುವನೇಶ್ವರಿ ಎಂ. ನಿರೂಪಿಸಿದರು. ಸಿದ್ಧಲಿಂಗ ಬಾಳಿ ಸ್ವಾಗತಿಸಿದರು. ಡಾ.ಶರಣಬಸಪ್ಪ ವಡ್ಡನಕೇರಿ ವಂದಿಸಿದರು.