ಅಥಣಿ ಗ್ರಾಮೀಣ: ಪ್ರತಿ ಗ್ರಾಮದ ಮಕ್ಕಳಲ್ಲಿ ಓದುವ ಓದುವ ಹಸಿವಿಗೆ ಗ್ರಂಥಾಲಯ ಬಲ ತುಂಬುತ್ತದೆ ಎಂದು ಶೇಗುಣಶಿಯ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಡಾ.ಧರೆಪ್ಪ ಜಿ. ಚೌಗಲಾ ಆರಂಭಿಸಿರುವ ಓದು ಖವಟಕೊಪ್ಪ ಗ್ರಂಥಾಲಯ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಂಥಾಲಯ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಬಹುದು. ಗ್ರಂಥಾಲಯುಗಳು ಊರಿನ ಶಿಕ್ಷಣ ಜ್ಯೋತಿಯಾಗಿ ಬೆಳಗಲಿ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಶಿವಾನಂದ ಚೌಗಲಾ ಮಾತನಾಡಿದರು. ನಿವೃತ್ತ ಶಿಕ್ಷಕ ಹಣಮಂತ ಬೆನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಸತ್ಕರಿಸಿದರು. ಹಣಮಂತ ಚಿಕ್ಕಣ್ಣವರ, ಬಿ.ಕೆ. ಅಣ್ಣನ್ನವರ, ಪಾರೀಶ ಕಲಚಿಮ್ಮಡ, ಮಾರುತಿ ಗುರವ, ಪ್ರವೀಣ ಪಾಟೀಲ, ಡಾ.ಸಿ.ಜಿ.ಚೌಗಲಾ, ನಿಂಗಪ್ಪ ಚೌಗಲಾ, ಜ್ಞಾನದೇವ ದರೂರ, ಪ್ರಕಾಶ ದಾಸರ, ಡಾ.ಸಂಜೀವ ಚೌಗಲಾ, ಅಶೋಕ ಕಾಂಬಳೆ, ಮಹಾದೇವ ಬಿಸ್ವಾಗರ, ರಾಜಶೇಖರ ಕನ್ನೋಳ್ಳಿ ಇತರರಿದ್ದರು.